ಇತ್ತೀಚೆಗೆ ಚಿಕ್ಕ ವಯಸ್ಸಿನಲ್ಲೇ ಕೂದಲು ಬೆಳ್ಳಗಾಗೋದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಚಿಕ್ಕ ಚಿಕ್ಕ ಮಕ್ಕಳಿಂದ ಹಿಡಿದು ಹದಿಹರೆಯದವರಿಗೂ ಬಿಳಿ ಕೂದಲಿನ ಸಮಸ್ಯೆ ಶುರುವಾಗಿಬಿಟ್ಟಿದೆ. ಇದೆಲ್ಲಾ ಕಾಮನ್ ಅಂದ್ಕೊಂಡು ನೀವು ಸುಮ್ಮನಾಗಿಬಿಡಬೇಡಿ, ಯಾಕಂದ್ರೆ ಅವಧಿಗೂ ಮುನ್ನವೇ ಕೂದಲು ಬೆಳ್ಳಗಾದವರಿಗೆ ಹೃದಯದ ಸಮಸ್ಯೆ ಕಾಡುವ ಸಾಧ್ಯತೆ ಹೆಚ್ಚು.
ವೃದ್ಧಾಪ್ಯಕ್ಕೂ ಮೊದಲೇ ಕೂದಲು ಬೆಳ್ಳಗಾದ್ರೆ ಅದು ಹೃದಯದ ತೊಂದರೆ ಬಗೆಗಿನ ಎಚ್ಚರಿಕೆಯ ಕರೆಗಂಟೆ ಎನ್ನುತ್ತಾರೆ ಸಂಶೋಧಕರು. ಹಾನಿಗೊಳಗಾದ ಡಿಎನ್ಎ, ಆಕ್ಸಿಡೇಟಿವ್ ಒತ್ತಡ, ಉರಿಯೂತ, ಹಾರ್ಮೋನುಗಳಲ್ಲಿನ ವ್ಯತ್ಯಾಸ, ಜೀವಕೋಶಗಳಲ್ಲಿನ ಬದಲಾವಣೆ ಕೂಡ ಕೂದಲು ಬೆಳ್ಳಗಾಗುವ ಸಮಸ್ಯೆಗೆ ಕಾರಣ.
ಹೃದಯದ ತೊಂದರೆಗೆ ಕೂಡ ಇವೇ ಮೂಲ ಕಾರಣಗಳು. ಸ್ಪೇನ್ ನಲ್ಲಿ ಈ ಬಗ್ಗೆ ಸಂಶೋಧನೆ ನಡೆಸಿರುವ ವಿಜ್ಞಾನಿಗಳು ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ. ಹಾಗಾಗಿ ಆದಷ್ಟು ಒತ್ತಡದ ಬದುಕಿನಿಂದ ದೂರವಿರಿ. ಮನಸ್ಸನ್ನು ಶಾಂತವಾಗಿಡಲು ಪ್ರಯತ್ನಿಸಿ.