ದೇಹಕ್ಕೆ ಬೇಕಾದ ಪ್ರೋಟೀನ್ ಅಗತ್ಯವನ್ನು ಪೂರೈಸಲು ಮೊಟ್ಟೆ ಮತ್ತು ಮಾಂಸಾಹಾರವನ್ನು ಸೇವನೆ ಮಾಡುವಂತೆ ಶಿಫಾರಸು ಮಾಡಲಾಗುತ್ತದೆ. ಆದರೆ ಭಾರತದಲ್ಲಿ ಸಸ್ಯಾಹಾರಿಗಳು ಸಾಕಷ್ಟಿದ್ದಾರೆ. ಹಾಗಾಗಿ ಎಲ್ಲರೂ ಮೊಟ್ಟೆ ಅಥವಾ ಮಾಂಸ ಸೇವನೆ ಮಾಡಲು ಇಷ್ಟಪಡುವುದಿಲ್ಲ. ಸಸ್ಯಾಹಾರಿಗಳು ಅಗತ್ಯ ಪ್ರೋಟೀನ್ ಪಡೆಯಲು ಕೆಲವೊಂದು ನಿರ್ದಿಷ್ಟ ತರಕಾರಿಗಳನ್ನು ತಿನ್ನಬೇಕು. ಅವು ಯಾವುವು ಅನ್ನೋದನ್ನು ನೋಡೋಣ.
ಹೂಕೋಸು: ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುವಂತಹ ತರಕಾರಿ ಇದು. ಹೂಕೋಸಿನಲ್ಲಿ ಪ್ರೋಟೀನ್, ಕ್ಯಾಲೋರಿಗಳು, ಮೆಗ್ನೀಸಿಯಮ್, ಕಬ್ಬಿಣ ಹೇರಳವಾಗಿ ಕಂಡುಬರುತ್ತದೆ. ಇದು ಚಳಿಗಾಲದಲ್ಲಿ ಬೆಳೆದರೂ ವರ್ಷವಿಡೀ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಹೂಕೋಸು ಸೇವನೆಯಿಂದ ದೇಹದಲ್ಲಿ ಪ್ರೋಟೀನ್ ಕೊರತೆ ಉಂಟಾಗುವುದಿಲ್ಲ.
ಬ್ರೊಕೊಲಿ: ಕೋಸಿನ ಜಾತಿಗೇ ಸೇರಿದ ತರಕಾರಿ ಬ್ರೊಕೊಲಿ. ಆರೋಗ್ಯಕ್ಕೆ ಹೇಳಿ ಮಾಡಿಸಿದಂತಹ ತರಕಾರಿ ಇದು. ಪ್ರೋಟೀನ್ ಹಾಗೂ ಕಬ್ಬಿಣದ ಅಂಶ ಬ್ರೊಕೊಲಿಯಲ್ಲಿ ಹೇರಳವಾಗಿದೆ. ಆದ್ದರಿಂದ ಇದನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಿ. ಬ್ರೊಕೊಲಿ ತಿನ್ನುವುದರಿಂದ ಸ್ನಾಯುಗಳು ಬಲಗೊಳ್ಳುತ್ತವೆ.
ಪಾಲಕ್ ಸೊಪ್ಪು: ಆರೋಗ್ಯಕರವಾದ ಸೊಪ್ಪನ್ನು ಆಗಾಗ ಸೇವನೆ ಮಾಡಬೇಕು. ಪಾಲಕ್ ಸೊಪ್ಪು ಕೂಡ ನಮ್ಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಸಹಕಾರಿಯಾಗಿದೆ. ಪಾಲಕ್‌ನಲ್ಲಿ ಪ್ರೋಟೀನ್, ವಿಟಮಿನ್ ಬಿ ಮತ್ತು ಫೈಬರ್ ಕಂಡುಬರುತ್ತದೆ. ಇದನ್ನು ನಿಯಮಿತವಾಗಿ ಸೇವನೆ ಮಾಡುವುದು ಸೂಕ್ತ.
ಅಣಬೆ: ಪ್ರೋಟೀನ್ ಭರಿತ ಆಹಾರವನ್ನು ಸೇವಿಸುವುದರಿಂದ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು. ಇದಕ್ಕಾಗಿ ನೀವು ಅಣಬೆಗಳನ್ನು ಸೇವನೆ ಮಾಡಿ. ಅಣಬೆಗಳನ್ನು ನಿಯಮಿತವಾಗಿ ತಿನ್ನುವುದರಿಂದ ವಿವಿಧ ಬಗೆಯ ಸೋಂಕಿನಿಂದ ಪಾರಾಗಬಹುದು. ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.