ಬೆಂಗಳೂರು: ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ನಡೆದಿರುವ ಚುನಾವಣೆ ಬಗ್ಗೆ ವ್ಯಂಗ್ಯವಾಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಇದೊಂದು ಡ್ರಾಮಾ ಎಂದು ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿ.ಟಿ.ರವಿ, ಎಐಸಿಸಿ ಅಧ್ಯಕ್ಷ ಚುನಾವಣೆಯ ಡ್ರಾಮಾ ನಡೆಯುತ್ತಿದೆ. ಬೇಕಾದರೆ ಈ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಕೇಳಿ. ಅದು ಸ್ವ ಇಚ್ಚೆಯಿಂದ ಅಲ್ಲ, ಕುಟುಂಬ ಒಪ್ಪಿದ್ರೆ ಮಾತ್ರ ಅಧ್ಯಕ್ಷರ ಆಯ್ಕೆಯಾಗುತ್ತದೆ ಎಂದು ಹೇಳಿದರು.
50 ವರ್ಷಗಳಿಂದ ರಾಜಕೀಯ ಮಾಡಿದವರಿಗೆ ಹೀಗೆ ಅಗಬಾರದು. ಇದು ಮಲ್ಲಿಕಾರ್ಜುನ ಖರ್ಗೆ ಅವರ ವ್ಯಕ್ತಿತ್ವಕ್ಕೆ ಅಲ್ಲ. ಜೀತ ಪದ್ಧತಿಯ ಮನೋಭಾವನೆ ಇರಬಾರದು. ಖರ್ಗೆ ಸೋನಿಯಾ ಗಾಂಧಿಯವರ ಅಡಿಯಾಳು ಎಂದು ಟೀಕಿಸಿದ್ದಾರೆ.