ಸ್ಯಾಂಡಲ್ ವುಡ್ ನಟಿ ಶ್ರೀಲೀಲಾ ಇತ್ತೀಚೆಗೆ ಟಾಲಿವುಡ್ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ರವಿತೇಜಾ ನಟನೆಯ ಆಕ್ಷನ್ ಎಂಟರ್ ಟೇನರ್ ಕಥಾಹಂದರ ಹೊಂದಿರುವ ‘ಧಮಾಕಾ’ ಚಿತ್ರದಲ್ಲಿ ಶ್ರೀ ಲೀಲಾ ನಾಯಕಿಯಾಗಿ ಅಭಿನಯಿಸಿದ್ದು, ಅಕ್ಟೋಬರ್ 21ಕ್ಕೆ ಈ ಸಿನಿಮಾ ಟೀಸರ್ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣವಾದ ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿದೆ.
ತ್ರಿನಾದ ರಾವ್ ನಿರ್ದೇಶನದ ಈ ಚಿತ್ರವನ್ನು ಪೀಪಲ್ ಮೀಡಿಯಾ ಫ್ಯಾಕ್ಟರಿ ಹಾಗೂ ಅಭಿಷೇಕ್ ಅಗರ್ವಾಲ್ ಲಾರ್ಡ್ಸ್ ಲಾಂಛನದಲ್ಲಿ ಅಭಿಷೇಕ್ ಅಗರ್ವಾಲ್ ಹಾಗೂ ಟಿ ವಿಶ್ವಪ್ರಸಾದ್ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಈ ಸಿನಿಮಾ ಶೂಟಿಂಗ್ ಕೊನೆಯ ಹಂತದಲ್ಲಿದ್ದು, ಬಿಡುಗಡೆ ದಿನಾಂಕ ಘೋಷಣೆ ಮಾಡಲು ಚಿತ್ರ ತಂಡ ಸಿದ್ಧವಾಗಿದೆ.