ಭಾರತೀಯ ವಿವಾಹದ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಕಣ್ಣಿಗೆ ಹಬ್ಬ ಸೃಷ್ಟಿಸಿಬಿಡುತ್ತವೆ. ತಮ್ಮದೇ ಆದ ದೊಡ್ಡ ವೀಕ್ಷಕರನ್ನು ಸಹ ಅವು ಹೊಂದಿವೆ.
ಮದುವೆ ಸಡಗರದಲ್ಲಿ ಡ್ಯಾನ್ಸ್ ಪ್ರದರ್ಶನಗಳು, ಮದುವೆಯ ಆಕರ್ಷಕ ಬಟ್ಟೆಗಳು, ವಧುವಿನ ಪ್ರವೇಶ, ಮತ್ತು ಪ್ರಣಯ ಅಥವಾ ತಮಾಷೆಯ ಕ್ಷಣಗಳ ವಿಡಿಯೋ ಹೆಚ್ಚಿರುತ್ತವೆ. ಪಂಜಾಬಿ ಮದುವೆಯ ಅಂತಹ ಒಂದು ವೀಡಿಯೊ ವೈರಲ್ ಆಗುತ್ತಿದೆ, ಅಲ್ಲಿ ವರ ಮತ್ತು ಅವನ ಸ್ನೇಹಿತರು ಡಿಜೆ ಐಟಂ ಸಾಂಗ್ ಅನ್ನು ಪ್ರಸ್ತುತಪಡಿಸುತ್ತಿದ್ದಂತೆ ಮನಸ್ಸು ಬಿಚ್ಚಿ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ.
ಈ ವಿಡಿಯೋವನ್ನು ಎಂಸಿ ರೋಹನ್ ಎಂಬುವರು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದು 313ಕೆ ವೀಕ್ಷಣೆಗಳು ಮತ್ತು 16ಕೆ ಲೈಕ್ಗಳನ್ನು ಪಡೆದುಕೊಂಡಿದೆ.
ಅಲ್ಲಿದ್ದವರು ಮೊದಲು ಭಾಂಗ್ರಾ ಹಾಡಿಗೆ ನೃತ್ಯವನ್ನು ಮುಗಿಸಿದರು, ನಂತರ ಅವರಿಗೆ ಬಾಲಿವುಡ್ ಹಾಡಿಗೆ ನೃತ್ಯ ಮಾಡುವಂತೆ ಕುಟುಂಬದಿಂದ ಸವಾಲು ಬಂದಿತು. ಅವರು 2010ರ ಓಂಕಾರ ಚಿತ್ರದಿಂದ ಬಿಪಾಶಾ ಬಸು ಒಳಗೊಂಡ ಸೂಪರ್ಹಿಟ್ ಹಾಡು ‘ಬೀಡಿ ಜಲೈಲೆ’ ಅನ್ನು ಆಯ್ಕೆ ಮಾಡಿ ಕುಣಿದರು.
ವರ ಮತ್ತು ಸ್ನೇಹಿತರು ಹಾಡಿನಲ್ಲಿ ಪವರ್ಫುಲ್ ಮತ್ತು ಮೋಜಿನ ಸ್ಟೆಪ್ ಹಾಕಿದರು ಮತ್ತು ಅಲ್ಲಿದ್ದ ಇತರರು ಪಂಜಾಬಿಯಲ್ಲಿ ‘ಹೋಯೇ, ಹೋಯೇ!’ ಎಂದು ಕೂಗುತ್ತಾ ಅವರನ್ನು ಹುರಿದುಂಬಿಸಿದರು.
ನೆಟ್ಟಿಗರು ಅಲ್ಲಿದ್ದ ವೈಬ್ ಅನ್ನು ಇಷ್ಟಪಟ್ಟಿದ್ದಾರೆ. ನೂರಾರು ಕಾಮೆಂಟ್ ಬಂದಿದ್ದು, ಮದುವೆಯಲ್ಲಿ ಪಾಲ್ಗೊಂಡವರ ಉತ್ಸಾಹ, ಮನಬಿಚ್ಚಿ ಕುಣಿದ ಬಗೆಯನ್ನು ಕೊಂಡಾಡಿದ್ದಾರೆ.