alex Certify ಪಂಜಾಬಿ ವಿವಾಹದಲ್ಲಿ ಭಾಂಗ್ರಾ ಸ್ಟೆಪ್​ ಹಾಕಿದ ವಿದೇಶಿಗ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಂಜಾಬಿ ವಿವಾಹದಲ್ಲಿ ಭಾಂಗ್ರಾ ಸ್ಟೆಪ್​ ಹಾಕಿದ ವಿದೇಶಿಗ….!

ಪಂಜಾಬಿ ಮದುವೆಯಲ್ಲಿ ದೇಶೀ ಅಂಕಲ್​ಗಳ ಒಟ್ಟಿಗೆ ವಿದೇಶಿಗ ಭಾಂಗ್ರಾ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ.
ನೃತ್ಯ ಮತ್ತು ಸಂಗೀತಕ್ಕೆ ಸಾಮಾನ್ಯವಾಗಿ ಜನರನ್ನು ಒಟ್ಟಾಗಿಸುವ ತಾಕತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಹ ಇಂದು ಹಾಡು ಮತ್ತು ನೃತ್ಯದ ವಿಡಿಯೋ ಹೆಚ್ಚು ಪ್ರಭಾವಶಾಲಿಯಾಗಿವೆ.

ಹೈಟಿಯ ಭಾಂಗ್ರಾ ನರ್ತಕ ಮತ್ತು ಕೊರಿಯೋಗ್ರಾರ್​ ಡ್ಯಾನಿ ಕೆಡೆಟ್​ ಅವರನ್ನು ‘ಕಾಲಾ ಶೇರ್​’ ಎಂದು ಪರಿಚಯಿಸುತ್ತಿರುವುದನ್ನು ಕ್ಲಿಪ್​ ಆರಂಭದಲ್ಲಿ ತೋರಿಸುತ್ತದೆ. ಈ ವಿಡಿಯೋವನ್ನು ಅವರು ತಮ್ಮ ಇನ್ ಸ್ಟಾಗ್ರಾಮ್​ ‘ಕಲರ್ಸ್ ಆಫೀಶಿಯಲ್​’ ನಲ್ಲಿ ಅಪ್ಲೋಡ್​ ಮಾಡಿದ್ದಾರೆ.

ಡ್ಯಾನಿ ಪಂಜಾಬಿ ಮದುವೆಯ ರಿಸಪ್ಷನ್​ನಲ್ಲಿ ಅಂಕಲ್​ಗಳೊಂದಿಗೆ ದಿಲ್ಜಿತ್​ ದೋಸಾಂಜ್​ ಹಾಡಿನಲ್ಲಿ ಭಾಂಗ್ರಾ ಮಾಡಲು ನೃತ್ಯ ಮಾಡುತ್ತಾರೆ. ಇಷ್ಟು ಚೆನ್ನಾಗಿ ಭಾಂಗ್ರಾ ಮಾಡುವುದು ಹೇಗೆ ಎಂದು ತಿಳಿದು ನೆಟ್ಟಿಗರಿಗೆ ಅಚ್ಚರಿ ಮೂಡಿಸಿದ್ದು, ರೀಲ್​ 592ಕೆ ವೀಕ್ಷಣೆ ಮತ್ತು 23ಕೆ ಲೈಕ್ಸ್​ ಗಳಿಸಿದೆ. “ಡ್ಯಾನಿಯಿಂದ ಡ್ಯಾನ್​ಪ್ರೀತ್​” ಎಂದು ನೆಟ್ಟಿಗರೊಬ್ಬರು ತಮಾಷೆ ಮಾಡಿದ್ದಾರೆ. ಆತ ಡ್ಯಾನ್ಸ್​ ಫ್ಲೋರ್​ ಪ್ರವೇಶಿಸುವ ಮೊದಲು ನೆಲಮುಟ್ಟಿ ನಮಸ್ಕರಿಸುವುದೂ ಸಹ ನೆಟ್ಟಿಗರಿಗೆ ಇಷ್ಟವಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...