ಹುಬ್ಬಳ್ಳಿ: ಚಿನ್ನಾಭರಣ, ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸೋದರರ ನಡುವೆ ಗಲಾಟೆ ನಡೆದು ಅಣ್ಣನೇ ತಮ್ಮನಿಗೆ ಚಾಕುವಿನಿಂದ ಇರಿದ ಘಟನೆ ಹುಬ್ಬಳ್ಳಿಯ ಕೇಶ್ವಾಪೂರದಲ್ಲಿ ನಡೆದಿದೆ.
ಸಾಗರ ಬಾಕಳೆ ಗಾಯಗೊಂಡವರು. ಅವರ ಅಣ್ಣ ಸಂಜಯ ಬಾಕಳೆ ಚಾಕುವಿನಿಂದ ಇರಿದಿದ್ದಾರೆ. ಆಸ್ತಿ ವಿಚಾರವಾಗಿ ಸಹೋದರರ ನಡುವೆ ಅನೇಕ ವರ್ಷಗಳಿಂದ ಜಗಳ ನಡೆಯುತ್ತಿತ್ತು. ವಿಜಯದಶಮಿ ಹಿನ್ನೆಲೆಯಲ್ಲಿ ಪೂಜೆಗೆ ಬಂದಿದ್ದ ತಮ್ಮ ಸಾಗರ ಚಿನ್ನ ಕೇಳಿದ್ದಕ್ಕೆ ಅಣ್ಣ ಚಾಕುವಿನಿಂದ ಇರಿದಿದ್ದಾನೆ. ಹೊಟ್ಟೆ ಹಾಗೂ ಎದೆಯ ಭಾಗಕ್ಕೆ ಇರಿತವಾಗಿ ಗಾಯಗೊಂಡಿರುವ ಸಾಗರನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಜಯ ಪರಾರಿಯಾಗಿದ್ದು, ಕೇಶ್ವಾಪೂರ ಠಾಣೆಗೆ ದೂರು ನೀಡಲಾಗಿದೆ.