ಹಣ್ಣು ಅಥವಾ ತರಕಾರಿಗಳ ಜ್ಯೂಸ್‌ಗಳನ್ನು ಮಾಡಿದ ತಕ್ಷಣ ಕುಡಿದರೆ ಉತ್ತಮ. ಆದರೆ ಆಗಾಗ ಇದನ್ನು ಮಾಡಲು ಕಷ್ಟ ಎಂಬ ಕಾರಣಕ್ಕೆ ಕೆಲವರು ತುಂಬಾ ಪ್ರಮಾಣದಲ್ಲಿ ಜ್ಯೂಸ್ ಮಾಡಿ ಶೇಖರಿಸಿಡುತ್ತಾರೆ. ಆದರೆ ಕೆಲವು ಜ್ಯೂಸ್‌ಗಳನ್ನು ತುಂಬಾ ಹೊತ್ತು ಇಟ್ಟರೆ ಅವುಗಳ ಫ್ರೆಶ್‌ನೆಸ್, ರುಚಿ, ಪೌಷ್ಟಿಕಾಂಶಗಳೆಲ್ಲಾ ಹೋಗುತ್ತವೆ. ಕೆಲವು ಸುಲಭ ವಿಧಾನಗಳ ಮೂಲಕ ಜ್ಯೂಸ್‌ನ ತಾಜಾತನ ಕಾಪಾಡಬಹುದು. ಅದು ಹೇಗೆ ಅಂತ ನೋಡಿ.
* ಜ್ಯೂಸ್‌ಗಳನ್ನು ಅಗಲವಾದ ಗಾಜಿನ ಬಾಟಲಿಗಳಲ್ಲಿ ಶೇಖರಿಸಿ ಇಟ್ಟರೆ ತುಂಬಾ ಹೊತ್ತು ತಾಜಾವಾಗಿರುತ್ತವೆ. ಸ್ಟೈನ್‌ಲೆಸ್ ಸ್ಟೀಲ್ ಕವಚವಿರುವ ಥರ್ಮೊ ಬಾಟಲಿ ಅಥವಾ ಸ್ಟೈನ್‌ಲೆಸ್ ಸ್ಟೀಲ್‌ನ ಬಾಟಲಿಯಲ್ಲಿ ಇಟ್ಟರೂ ಓಕೆ.
* ಹಣ್ಣಿನ ಅಥವಾ ತರಕಾರಿ ಜ್ಯೂಸ್‌ಗಳಿಗೆ ಸ್ವಲ್ಪ ನಿಂಬೆ ರಸವನ್ನು ಹಾಕಿ ಶೇಖರಿಸಿಡಿ. ಈ ರಸದಲ್ಲಿರುವ ಸಿಟ್ರಿಕ್ ಆಮ್ಲ ಜ್ಯೂಸನ್ನು ಬಹು ಸಮಯದವರೆಗೆ ತಾಜಾವಾಗಿಡುತ್ತದೆ.
* ಜ್ಯೂಸ್‌ನ ಬಾಟಲಿಗಳನ್ನು ಫ್ರಿಜ್ ಮುಂತಾದ ತಂಪು ಸ್ಥಳಗಳಲ್ಲಿ ಇಡಿ. ಹಣ್ಣಿನ ರಸವನ್ನು ಐಸ್‌ಕ್ಯೂಬ್ ಟ್ರೇನಲ್ಲಿಟ್ಟು ಫ್ರೀಜರ್‌ನಲ್ಲಿ ಇಟ್ಟರೆ ಹೆಚ್ಚಿನ ದಿನಗಳವರೆಗೂ ಜ್ಯೂಸ್ ಕೆಡುವುದಿಲ್ಲ.