ಸಾವು…… ಯಾವ ಕ್ಷಣದಲ್ಲಿ, ಯಾವ ರೂಪದಲ್ಲಿ, ಬಂದು ಬಲಿ ತೆಗೆದುಕೊಳ್ಳುತ್ತೊ ಯಾರಿಗೂ ಗೊತ್ತಿಲ್ಲ. ಇತ್ತೀಚೆಗೆ ನಡೆದ ಘಟನೆ ನೋಡ್ತಿದ್ರೆ, ಈ ಮಾತು ಸತ್ಯ ಅಂತ ಅನಿಸದೇ ಇರೋಲ್ಲ.
ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಿರಾರ್ ಪಟ್ಟಣದಲ್ಲಿ ನಡೆದ ಗರ್ಬಾ ಕಾರ್ಯಕ್ರಮದಲ್ಲಿ ಮನೀಶ್ ನಾರಪ್ಜಿ (35) ನೃತ್ಯ ಮಾಡುವಾಗ ಹಠಾತ್ ಕುಸಿದುಬಿದ್ದಿದ್ದಾರೆ. ಅವರನ್ನ ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿದರೂ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದರು.
ಈ ಸುದ್ದಿ ಮನೀಶ್ ನಾರಪ್ಜಿ ಅವರ ತಂದೆಗೆ ತಿಳಿಸಲಾಯಿತು. ವೈದ್ಯರು ಯಾವಾಗ ಮಗ ಸಾವನ್ನಪ್ಪಿದ್ದಾರೆ ಎಂದು ಹೇಳ್ತಿದ್ದ ಹಾಗೆಯೇ ತಂದೆ ಕೂಡಾ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಭಾನುವಾರ ಮಧ್ಯರಾತ್ರಿ ವಿರಾರ್ನ ಗ್ಲೋಬಲ್ ಸಿಟಿ ಕಾಂಪ್ಲೆಕ್ಸ್ನಲ್ಲಿ ಗಾರ್ಬಾ ನೃತ್ಯ ಮಾಡುವಾಗ ಮನೀಶ್ ಅವರ ಸಾವು ಹೃದಯಾಘಾತದಿಂದ ಸಾವು ಸಂಭವಿಸಿದೆ. ಆ ಶಾಕ್ನಿಂದ ಚೇತರಿಸಿಕೊಳ್ಳಲಾಗದೇ ನಾರಪ್ಜಿ ಸೋನಿಗ್ರಾ(66)ಅವರು ಸಾವನ್ನಪ್ಪಿದ್ದಾರೆ.
ತಂದೆ-ಮಗ ಇಬ್ಬರ ಸಾವಿನಿಂದಾಗಿ ಕುಟುಂಬ ಆಘಾತದಲ್ಲಿದೆ. ಸದ್ಯಕ್ಕೆ ಇದು ಆಕಸ್ಮಿಕ ಸಾವು ಎಂದು ಹೇಳಲಾಗಿದ್ದರೂ, ಎರಡು ಮೃತ ದೇಹವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.