ನವರಾತ್ರಿಯ 9ನೇ ದಿನ – ನವಮಿಯಂದು ದೇಶವು ನವರಾತ್ರಿ ಉತ್ಸವಗಳಿಗೆ ಸಜ್ಜಾಗುತ್ತಿರುವಾಗ, ರಾಜಕೀಯ ನಾಯಕರು ತಮ್ಮದೇ ಆದ ರೀತಿಯಲ್ಲಿ ಹಬ್ಬವನ್ನ ಆಚರಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರಿಂದ ಹಿಡಿದು ಗೃಹ ಸಚಿವ ಅಮಿತ್ ಶಾ ಹಾಗೂ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಸಂಭ್ರಮದಿಂದ ಹಬ್ಬವನ್ನ ಆಚರಿಸಿದ್ದಾರೆ.
ಇಂದು ಪ್ರಧಾನಿ ಮೋದಿ, ಹಿಮಾಚಲ ಪ್ರದೇಶದಲ್ಲಿ ಇದ್ದ ಕಾರಣ ಅವರು ಬಿಲಾಸ್ಪುರದ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನ ಉದ್ಘಾಟನೆ ಹಾಗೂ ಇತರ ಯೋಜನೆಗಳ ಜೊತೆಗೆ ಕುಲುವಿನ ಧಾಲ್ಪುರ್ ಮೈದಾನದಲ್ಲಿ ಕುಲು ದಸರಾ ಆಚರಣೆಯಲ್ಲಿ ಭಾಗವಹಿಸಿದರು.
ಈ ವಿಶಿಷ್ಟ ಕಾರ್ಯಕ್ರಮ ಕಣಿವೆಯಲ್ಲಿ ಇರುವ 300 ಕ್ಕೂ ಹೆಚ್ಚು ದೇವತೆ ಹೆಸರಿನಲ್ಲಿ ಪೂಜೆಯನ್ನ ಮಾಡಲಾಗುತ್ತೆ. ಐತಿಹಾಸಿಕ ಕುಲು ದಸರಾ ಆಚರಣೆಯಲ್ಲಿ ದೈವಿಕ ರಥಯಾತ್ರೆ ಮತ್ತು ದೇವತೆಗಳ ಮಹಾಸಭೆಗೆ ಮೋದಿ ಸಾಕ್ಷಿಯಾಗಲಿದ್ದಾರೆ. ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಸಹ ಮೋದಿ ಅವರೊಂದಿಗೆ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಇನ್ನೂ ಅಮಿತ್ ಶಾ ಅವರು ನವಮಿಯನ್ನ ಜಮ್ಮು ಮತ್ತು ಕಾಶ್ಮೀರದಲ್ಲಿ ಆಚರಿಸಲಿದ್ದಾರೆ. ದಸರಾ ಆಚರಣೆಯ ಭಾಗವಾಗಿ, ಅಮಿತ್ ಶಾ ಅವರು ಮಾತಾ ವೈಷ್ಣೋ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ, ಅದರ ನಂತರ ಅಲ್ಲಿ ನಡೆಯಲಿರುವ ರ್ಯಾಲಿ ಹಾಗೂ ಸಭೆಯನ್ನ ಉದ್ದೇಶಿಸಿ ಅವರು ಮಾತನಾಡಿದರು.
ನವರಾತ್ರಿಯ ಒಂಬತ್ತನೇ ದಿನವಾದ ನವಮಿಯ ಸಂದರ್ಭದಲ್ಲಿ ಯೋಗಿ ಆದಿತ್ಯನಾಥ್ ಅವರು ಗೋರಖ್ಪುರದಲ್ಲಿ ‘ಕನ್ಯಾ ಪೂಜೆ’ ನಡೆಸಿದರು. ಈ ಪೂಜೆಯ ನಂತರ ಗೋರಖನಾಥ ದೇಗುಲದಿಂದ ವಿಜಯದಶಮಿಯಂದು ಹೊರಡುವ ಮೆರವಣಿಗೆಗೆ ಚಾಲನೆ ನೀಡಿ ಅದೇ ರಥವನ್ನ ಏರಲಿದ್ದಾರೆ.