ಹೇಮಂತ್ ಕುಮಾರ್ ಲೋಹಿಯಾ,(57) ಜಮ್ಮು ಮತ್ತು ಕಾಶ್ಮೀರ ಕಾರಾಗೃಹ ಇಲಾಖೆಯ ಡಿಜಿಪಿ. ಮೊನ್ನೆ ಇವರ ಕತ್ತನ್ನ ಸೀಳಿ ಹತ್ಯೆ ಮಾಡಲಾಗಿತ್ತು. ಅವರ ಮೃತದೇಹ ಪತ್ತೆಯಾದಾದ ಅದರ ಮೇಲೆ ಸುಟ್ಟ ಗಾಯಗಳು ಕೂಡಾ ಅಲ್ಲಲ್ಲಿ ಪತ್ತೆಯಾಗಿತ್ತು.
ಈ ಕೊಲೆಯ ಹಿಂದೆ ಯಾರ ಕೈವಾಡ ಇರಬಹುದು ಅನ್ನೋ ಶಂಕೆ ಬಂದಾಗಲೇ ಮೊತ್ತ ಮೊದಲು ಸಂಶಯದ ಮುಳ್ಳು ತಿರುಗಿದ್ದು ಇವರ ಮನೆಯ ಕೆಲಸಗಾರ 36 ವರ್ಷದ ಯಾಸಿರ್ ಅಹ್ಮದ್ ಮೇಲೆ.
ಯಾಸಿರ್ ಅಹ್ಮದ್ ಬಂಧನದ ನಂತರ ಆತನ ಕೋಣೆಯನ್ನ ಪರಿಶೀಲಿಸಿದ ಪೊಲೀಸರ ಕೈಗೆ ಡೈರಿಯೊಂದು ಸಿಕ್ಕಿದೆ. ಅದರಲ್ಲಿ ಬರೆಯಲಾಗಿರುವ ಕೆಲ ವಿಚಾರಗಳನ್ನ ಗಮನಿಸಿದರೆ ಆತ ಖಿನ್ನತೆಗೆ ಒಳಗಾಗಿದ್ದ ಅನ್ನೋದು ಗೊತ್ತಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಯಾಸಿರ್ ಅಹ್ಮದ್ ಈತನಿಗೆ ದಿನಚರಿ ಬರೆಯುವ ಅಭ್ಯಾಸವಿತ್ತು. ಆತ ಬರೆದಿರುವ ಡೈರಿಯಲ್ಲಿ ಸಾವಿನ ಬಗ್ಗೆ, ಹಾಗೂ ಜೀವನದಲ್ಲಿ ಆತನಿಗೆ ಇರುವ ನಿರುತ್ಸಾಹದ ಬಗ್ಗೆ ಸ್ಪಷ್ಟವಾಗಿ ಬರೆದುಕೊಂಡಿದ್ದ. ಇದನ್ನ ನೋಡ್ತಿದ್ರೆ ಆತ ಖಿನ್ನತೆಗೆ ಒಳಗಾಗಿದ್ದ ಅನ್ನೋದ್ರಲ್ಲಿ ಎರಡು ಮಾತೇ ಇಲ್ಲ. ಆತನೇ ಖುದ್ದು ಬರೆದುಕೊಂಡಿರುವ ಪ್ರಕಾರ, “ಡಿಯರ್ ಡೆತ್ ನನ್ನ ಜೀವನದಲ್ಲಿ ಬಾ” ಅನ್ನುವ ಸಾಲುಗಳನ್ನ ಬರೆದಿಟ್ಟಿದ್ದನ್ನ ನೋಡಬಹುದಾಗಿದೆ. ಇದರ ಹೊರತಾಗಿ “ಕ್ಷಮಿಸಿ, ನಾನು ಕೆಟ್ಟ ದಿನ, ವಾರ, ತಿಂಗಳು, ವರ್ಷ, ಜೀವನವನ್ನು ಹೊಂದಿದ್ದೇನೆ” ಎಂದು ಮತ್ತೊಂದೆಡೆ ಬರೆದುಕೊಂಡಿದ್ದಾನೆ.
ಇನ್ನೂ ಆತನಿಗೆ ಸೇರಿದ್ದೆಂದು ಪೋಲೀಸರು ಹೇಳುವ ಡೈರಿಯಲ್ಲಿ ಹಿಂದಿಯಲ್ಲಿ ಹಾಡುಗಳಿವೆ, ಅದರಲ್ಲಿ ಒಂದು “ಭೂಲಾ ದೇನಾ ಮುಝೆ” (‘ನನ್ನನ್ನು ಮರೆತುಬಿಡಿ’) ಎಂದು ಶೀರ್ಷಿಕೆ ನೀಡಲಾಗಿದೆ. ಇದರ ಹೊರತಾಗಿ,ಇತರ ಪುಟಗಳು ಸಣ್ಣ ವಾಕ್ಯಗಳು ಮತ್ತು ಟಿಪ್ಪಣಿಗಳಿಂದ ತುಂಬಿವೆ – “ನಾನು ನನ್ನ ಜೀವನವನ್ನು ದ್ವೇಷಿಸುತ್ತೇನೆ”, “ಜೀವನವು ಕೇವಲ ದುಃಖ…..” ಮತ್ತು “ಮೈ ಲೈಫ್ 1%, ಪ್ರೀತಿ 0%, ಉದ್ವೇಗ 90%, ದುಃಖ 99%, ಕೃತಕ ನಗು 100%,”” ಎಂದು ಲೇಬಲ್ ಮಾಡಲಾದ ಫೋನ್ ಬ್ಯಾಟರಿಯ ರೇಖಾಚಿತ್ರದೊಂದಿಗೆ ಪ್ರಾರಂಭವಾಗುವ ಒಂದು ಚಾರ್ಟ್ ಅನ್ನು ಹೊಂದಿದೆ .
‘ಲೈಫ್’ ಎಂಬ ಶೀರ್ಷಿಕೆಯ ಮತ್ತೊಂದು ಟಿಪ್ಪಣಿ ಬರೆದಿದ್ದು ಬರವಣಿಗೆಯ ನಿಖರವಾದ ದಿನಾಂಕ ತಿಳಿದಿಲ್ಲ “ಮೈ ಜೈಸಿ ಲೈಫ್ ಜಿ ರಹಾ ಹೂಂ, ಮುಜೆ ಉಸ್ ಸಾ ಕೋಯಿ ಸಮಸ್ಯಾ ನಹೀ ಹೈ… ಸಮಸ್ಯಾ ಬಾತ್ ಸೆ ಹೈ, ಆಗೇ ಹಮಾರಾ ಕ್ಯಾ ಹೋಗಾ (‘ನಾನು ಮುನ್ನಡೆಸುತ್ತಿರುವ ಜೀವನದೊಂದಿಗೆ ನನಗೆ ಯಾವುದೇ ಸಮಸ್ಯೆ ಇಲ್ಲ ; ಸಮಸ್ಯೆಯು ಭವಿಷ್ಯದಲ್ಲಿ ಏನಾಗಬಹುದು) ಅನ್ನುವ ಅರ್ಥ ಕೊಡುವ ಸಾಲುಗಳಾಗಿವೆ.