ಹಾಲು ನಮ್ಮ ಆಹಾರದ ಪ್ರಮುಖ ಭಾಗವಾಗಿದೆ. ಹಿರಿಯರಿಂದ ಹಿಡಿದು ಮಕ್ಕಳವರೆಗೆ ಎಲ್ಲರೂ ಪ್ರತಿದಿನ ಹಾಲು ಸೇವಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಹಾಲು ಕಲಬೆರಕೆಯಾಗಿದ್ದರೆ ನಮ್ಮ ಆರೋಗ್ಯದ ಮೇಲೆ ಸಾಕಷ್ಟು ದುಷ್ಪಪರಿಣಾಮ ಬೀರುತ್ತದೆ. ಹಾಗಾಗಿ ಹಾಲು ಕಲಬೆರಕೆಯಾಗಿದೆಯೋ ಅಥವಾ ಶುದ್ಧವಾಗಿದೆಯೋ ಅನ್ನೋದನ್ನು ಪತ್ತೆ ಮಾಡಲು ಸಾಧ್ಯವಾಗುವಂತಹ ಕೆಲವು ವಿಧಾನಗಳ ಬಗ್ಗೆ ತಿಳಿದುಕೊಳ್ಳೋಣ.
ಸ್ಲಿಪ್ ಟೆಸ್ಟ್: ಕಲಬೆರಕೆ ಹಾಲನ್ನು ಗುರುತಿಸಲು ನೀವು ಸ್ಲಿಪ್ ಪರೀಕ್ಷೆಯನ್ನು ಮಾಡಬಹುದು. ಇದಕ್ಕಾಗಿ ಒಂದು ಹನಿ ಹಾಲನ್ನು ತೆಗೆದುಕೊಂಡು ಅದನ್ನು ಮೃದುವಾದ ಸ್ಥಳದಲ್ಲಿ ಇರಿಸಿ. ಹಾಲು ಕೆಳಮುಖವಾಗಿ ಹರಡಿ ಅದರ ಹಿಂದೆ ಬಿಳಿ ಗುರುತುಗಳನ್ನು ಬಿಟ್ಟರೆ, ಹಾಲು ಶುದ್ಧವಾಗಿರುತ್ತದೆ. ಮತ್ತೊಂದೆಡೆ, ಹಾಲು ಹರಿಯುವಾಗ ಯಾವುದೇ ರೀತಿಯ ಗುರುತು ಬಿಡದಿದ್ದರೆ ಅದರಲ್ಲಿ ತುಂಬಾ ನೀರು ಬೆರೆಸಿರಬಹುದು. ಅಥವಾ ಬೇರೆ ಇನ್ನೇನಾದರೂ ಕಲಬೆರಕೆಯಾಗಿರಬಹುದು.
ಉಜ್ಜುವ ಮೂಲಕ ಪರಿಶೀಲಿಸಿ : ಹಾಲಿನ ಕಲಬೆರಕೆಯನ್ನು ಗುರುತಿಸಲು, ಮೊದಲು ಕೈಗಳ ಮೇಲೆ ಕೆಲವು ಹನಿ ಹಾಲನ್ನು ತೆಗೆದುಕೊಂಡು ಅದನ್ನು ಉಜ್ಜಿಕೊಳ್ಳಿ, ಹಾಲು ಸಾಬೂನು ಅಥವಾ ತುಂಬಾ ಜಿಡ್ಡಿನಂತಿದ್ದರೆ, ಅದು ಸಿಂಥೆಟಿಕ್ ಹಾಲು ಆಗಿರಬಹುದು. ಹಾಲನ್ನು ಬಿಸಿ ಮಾಡಲು ಪ್ರಯತ್ನಿಸಿ, ಹಾಲು ಹಳದಿ ಬಣ್ಣಕ್ಕೆ ತಿರುಗುತ್ತಿದ್ದರೆ, ಹಾಲು ಕಲಬೆರಕೆಯಾಗಿದೆ ಎಂದರ್ಥ.
ನೀರು ಸುರಿದು ಪರೀಕ್ಷೆ: ಕೆಲವೊಮ್ಮೆ ಹಾಲಿಗೆ ಡಿಟರ್ಜೆಂಟ್ ಸೇರಿಸಿ ಕಲಬೆರಕೆ ಮಾಡಲಾಗುತ್ತದೆ. ಕಲಬೆರಕೆ ಹಾಲನ್ನು ಗುರುತಿಸಲು ಮೇಲಿನಿಂದ ಸ್ವಲ್ಪ ನೀರು ಹಾಕಿ. ಅದರಲ್ಲಿ ನೊರೆ ಬರಲಾರಂಭಿಸಿದರೆ ಹಾಲು ಕಲಬೆರಕೆ ಎಂದು ತಿಳಿಯುತ್ತದೆ.
ಅಯೋಡಿನ್ ಹನಿಗಳನ್ನು ಬಳಸಿ: ಕಲಬೆರಕೆ ಹಾಲನ್ನು ಪತ್ತೆಹಚ್ಚಲು ನೀವು ಅಯೋಡಿನ್ ಹನಿಗಳನ್ನು ಬಳಸಬಹುದು. ಇದಕ್ಕಾಗಿ, ಹಾಲಿಗೆ ಕೆಲವು ಹನಿ ಅಯೋಡಿನ್ ಹನಿಗಳನ್ನು ಸೇರಿಸಿ, ಹಾಲಿನ ಬಣ್ಣವು ಬಿಳಿ ಬಣ್ಣದಿಂದ ನೀಲಿ ಬಣ್ಣಕ್ಕೆ ಬದಲಾದರೆ, ಅದು ಕಲಬೆರಕೆಯಾಗಿದೆ ಎಂದು ಅರ್ಥಮಾಡಿಕೊಳ್ಳಿ.