ಕಳಪೆ ಜೀವನಶೈಲಿ ಮತ್ತು ಸೂಕ್ತವಾದ ಆಹಾರ ಸೇವಿಸದೇ ಇದ್ದರೆ ತೂಕ ಹೆಚ್ಚಾಗುತ್ತದೆ. ಬಹುತೇಕರು ಬೊಜ್ಜು ಮತ್ತು ಅಧಿಕ ತೂಕದ ಸಮಸ್ಯೆಯಿಂದ ಅನೇಕ ಕಾಯಿಲೆಗಳಿಗೂ ತುತ್ತಾಗುತ್ತಾರೆ. ಸಾಕಷ್ಟು ಕಸರತ್ತು ಮಾಡಿದ್ರೂ ಕರಗದ ಬೊಜ್ಜು ಹಾಗೂ ತೂಕವನ್ನು ಇಳಿಸಿಕೊಳ್ಳಲು ಅಧ್ಬುತವಾದ ಪರಿಹಾರಗಳನ್ನು ನೋಡೋಣ. ಇದನ್ನು ಅಳವಡಿಸಿಕೊಂಡ್ರೆ ಸುಲಭವಾಗಿ 10 ಕೆಜಿ ತೂಕವನ್ನು ಕಡಿಮೆ ಮಾಡಬಹುದು.
ತೂಕವನ್ನು ಕಳೆದುಕೊಳ್ಳಲು ಅತ್ಯಂತ ಮುಖ್ಯವಾದ ವಿಷಯವೆಂದರೆ ನಾವು ಅಂದುಕೊಂಡಿದ್ದನ್ನು ಪ್ರಾರಂಭಿಸುವುದು. ಏಕೆಂದರೆ ಸೋಮಾರಿತನದಿಂದಾಗಿ ಅನೇಕರು ನಾಳೆ ನಾಳೆ ಎಂದುಕೊಳ್ಳುತ್ತಲೇ ದಿನಗಳನ್ನು ತಳ್ಳುತ್ತಾರೆ.
ಇದಕ್ಕೆ ಅತ್ಯಂತ ಶಿಸ್ತು ಮತ್ತು ತಾಳ್ಮೆಯ ಅಗತ್ಯವಿದೆ. ತೂಕವನ್ನು ವೇಗವಾಗಿ ಕಡಿಮೆ ಮಾಡಿಕೊಳ್ಳಲು ಹೋಗಿ ಆರೋಗ್ಯಕ್ಕೆ ಹಾನಿ ಮಾಡಿಕೊಳ್ಳಬೇಡಿ. 10 ಕೆಜಿಯಷ್ಟು ತೂಕ ಕಡಿಮೆ ಮಾಡಲು ನೀವು ಬಯಸಿದರೆ, ಇದಕ್ಕಾಗಿ ಆಹಾರವನ್ನು ಬದಲಾಯಿಸಬೇಕಾಗುತ್ತದೆ. ಆದ್ದರಿಂದ ಮೊದಲು ನಿಮ್ಮ ಮನಸ್ಸನ್ನು ಇದಕ್ಕಾಗಿ ಸಿದ್ಧಪಡಿಸಿಕೊಳ್ಳಿ ಏಕೆಂದರೆ ನಿಮ್ಮ ಮನಸ್ಸು ಇಷ್ಟವಾದ ಆಹಾರವನ್ನು ತಿನ್ನಲು ಬಯಸುತ್ತದೆ.
ಆದರೆ ನಾಲಿಗೆಯ ರುಚಿ, ತಿನಿಸುಗಳನ್ನು ತಿನ್ನುವ ಬಯಕೆ ಇವನ್ನೆಲ್ಲ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ನೀವು ದೃಢ ನಿಶ್ಚಯ ಮಾಡಿದ್ರೆ ಮಾತ್ರ ಗುರಿ ಸಾಧಿಸಬಹುದು. ಡಯಟ್ ಅನ್ನು ಕೂಡ ಮುಂದೂಡಬೇಡಿ. ನಿರ್ಧಾರ ಮಾಡಿದ ಮರುಕ್ಷಣದಿಂದಲೇ ಪ್ರಾರಂಭಿಸಿಬಿಡಿ. ನಿಮ್ಮ ಮನಸ್ಥಿತಿ ಇದಕ್ಕೆಲ್ಲ ಸಿದ್ಧವಾಗಿದ್ದರೆ ಆರಾಮಾಗಿ 10 ಕೆಜಿ ತೂಕವನ್ನು ಇಳಿಸಿಬಿಡಬಹುದು.