ಹಬ್ಬ ಹರಿದಿನಗಳಲ್ಲಿ ಆಭರಣ ಪ್ರಿಯರು ಚಿನ್ನ, ಬೆಳ್ಳಿ ಖರೀದಿಗೆ ಮುಗಿಬೀಳ್ತಾರೆ. ಬೇಡಿಕೆ ಹೆಚ್ಚಾಗ್ತಿದ್ದಂತೆ ಬೆಲೆಯೂ ಏರಿಕೆಯಾಗೋದು ಕಾಮನ್. ಆದ್ರೆ ಈ ಬಾರಿ ದೀಪಾವಳಿಯಂದು ಚಿನ್ನ ಅಗ್ಗವಾಗಬಹುದು ಎಂಬುದು ತಜ್ಞರ ಅಭಿಪ್ರಾಯ.
ಇಂದು ಬಂಗಾರದ ಬೆಲೆ ಏರಿಕೆಯಾಗಿದೆ. ಬೆಳ್ಳಿ ದರ ಕೂಡ ಹೆಚ್ಚಳವಾಗಿದ್ದು, ಆಭರಣ ಪ್ರಿಯರಿಗೆ ನಿರಾಸೆ ಮೂಡಿಸಿದೆ. ಚಿನ್ನದ ಬೆಲೆ ಸದ್ಯ 24 ಕ್ಯಾರೆಟ್‌ನ 10 ಗ್ರಾಂಗೆ 51,416 ರೂಪಾಯಿ ಆಗಿದೆ. ಬೆಳ್ಳಿ ಕೆಜಿಗೆ 61,665 ರೂಪಾಯಿಗೆ ವಹಿವಾಟಾಗುತ್ತಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ ಬಂಗಾರ ಹಾಗೂ ಬೆಳ್ಳಿ ಬೆಲೆಗಳು ಹೆಚ್ಚಳವಾಗಿವೆ. ಚಿನ್ನ ಶೇ.1.90 ರಷ್ಟು ಏರಿಕೆಯೊಂದಿಗೆ ಔನ್ಸ್ಗೆ 1,695.92 ಡಾಲರ್ ಆಗಿದೆ. ಬೆಳ್ಳಿ ಶೇ.8.46ರಷ್ಟು ಜಿಗಿತದೊಂದಿಗೆ ಔನ್ಸ್‌ಗೆ 20.72 ಡಾಲರ್‌ನಷ್ಟಾಗಿದೆ. ತಜ್ಞರ ಪ್ರಕಾರ ದೀಪಾವಳಿ ವೇಳೆಗೆ ಚಿನ್ನದ ಬೆಲೆ 46,000 ರೂಪಾಯಿ ಆಗಬಹುದು. ಹಾಗೇನಾದ್ರೂ ಆದ್ರೆ ಆಭರಣ ಖರೀದಿಗೆ ಇದು ಸಕಾಲ.