alex Certify BIG NEWS: ಪಿಎಫ್‌ಐ – SDPI ನಂಟಿನ ವದಂತಿ ಕುರಿತು ಚುನಾವಣಾ ಆಯೋಗದಿಂದ ಮಹತ್ವದ ಸ್ಪಷ್ಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಪಿಎಫ್‌ಐ – SDPI ನಂಟಿನ ವದಂತಿ ಕುರಿತು ಚುನಾವಣಾ ಆಯೋಗದಿಂದ ಮಹತ್ವದ ಸ್ಪಷ್ಟನೆ

ಬೆಂಗಳೂರು: ಪಿಎಫ್ಐ ಸೇರಿ ಒಟ್ಟು 8 ಸಂಘಟನೆಗಳನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿ ಆದೇಶ ಹೊರಡಿಸಿದೆ. ಈ ಬೆನ್ನಲ್ಲೇ ಎಸ್ ಡಿ ಪಿ ಐ ಕೂಡ ಬ್ಯಾನ್ ಮಾಡಬೇಕು ಎಂಬ ಒತ್ತಾಯ ದೊಡ್ಡ ಮಟ್ಟದಲ್ಲಿ ಕೇಳಿ ಬಂದಿತ್ತು. ಆದರೆ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಇದೀಗ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ.

ಹೌದು, ಈ ಕುರಿತಂತೆ ಮುಖ್ಯ ಚುನಾವಣಾ ಆಯೋಗದ ಆಯುಕ್ತ ರಾಜೀವ್ ಕುಮಾರ್ ಮಾತನಾಡಿ, ಎಸ್ ಡಿ ಪಿ ಐ ಗೂ ಪಿಎಫ್ಐ ಗೂ ಯಾವುದೇ ಸಂಬಂಧ ಇಲ್ಲ. ಎಸ್ ಡಿ ಪಿ ಐ ಎಲ್ಲಾ ಅಗತ್ಯ ದಾಖಲೆಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದೆ. ಪಿಎಫ್ಐ ಜೊತೆಗೆ ಯಾವುದೇ ನಂಟು ಇಲ್ಲ ಅನ್ನೋದು ದಾಖಲೆ ಮೂಲಕ ಗೊತ್ತಾಗುತ್ತಿದೆ ಎಂದಿದ್ದಾರೆ.

2009ರ ಜೂನ್ 21ರಂದು ಎಸ್ ಡಿ ಪಿ ಐ ಅಸ್ತಿತ್ವಕ್ಕೆ ಬಂದಿದ್ದು, 2010 ಏಪ್ರಿಲ್ 13ರಂದು ಭಾರತದ ಚುನಾವಣಾ ಆಯೋಗದಲ್ಲಿ ತಮ್ಮ ಪಕ್ಷದ ಕುರಿತಂತೆ ವಿವರವನ್ನು ನೋಂದಾಯಿಸಿಕೊಂಡಿದೆಯಂತೆ. ಇನ್ನು ಕರ್ನಾಟಕ, ಕೇರಳ, ತಮಿಳುನಾಡು, ರಾಜಸ್ಥಾನ, ಬಿಹಾರ, ಪಶ್ಚಿಮ ಬಂಗಾಳ ಆಂಧ್ರಪ್ರದೇಶಗಳಲ್ಲಿ ಎಸ್ ಡಿ ಪಿ ಐ ಸದಸ್ಯರನ್ನು ಹೊಂದಿದೆ. ಜೊತೆಗೆ ಸ್ಥಳೀಯ ಸಂಸ್ಥೆ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಸದಸ್ಯ ಸ್ಥಾನ ಗೆದ್ದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...