ದಸರಾ ಹಬ್ಬದ ಕುರಿತು ಹೀಗೊಂದು ಮಾತು ಪ್ರಚಲಿತದಲ್ಲಿದೆ. ದಸರಾ ಎನ್ನುವುದು ದಶಂ ಹರ ಎಂಬ ಸಂಸ್ಕೃತ ಪದದ ಅಪಭ್ರಂಶವಾಗಿದೆ. ದಶ ಎಂದರೆ 10, ಹರ ಎಂದರೆ ನಿರ್ಮೂಲನೆ ಮಾಡುವುದು. ಅಂದರೆ ನಮ್ಮಲ್ಲಿನ ಹತ್ತು ವಿಧದ ದುರ್ಗುಣಗಳನ್ನು ನಿರ್ಮೂಲನೆ ಮಾಡುವುದು ದಸರಾ ಹಬ್ಬದ ಹಿಂದಿರುವ ಸ್ವಾರಸ್ಯ.
ಆ ಹತ್ತು ಗುಣಗಳು ಯಾವುದಿರಬಹುದೆಂಬ ಕುತೂಹಲ ನಿಮಗಿದ್ದರೆ, ಕಾಮ, ಕ್ರೋಧ, ಮೋಹ, ಮದ, ಲೋಭ, ಮತ್ಸರ, ಸ್ವಾರ್ಥ, ಅನ್ಯಾಯ, ಅಮಾನವೀಯತೆ ಹಾಗೂ ಅಹಂಕಾರ ಇವೇ ಆ ದುರ್ಗುಣಗಳು. ನಮ್ಮಲ್ಲಿರುವ ಈ ಹತ್ತು ರಾಕ್ಷಸರನ್ನು ಕೊಂದು ವಿಜಯ ಸಾಧಿಸುವ ದಿನವೇ ನಾವೆಲ್ಲರೂ ವಿಜೃಂಭಣೆಯಿಂದ ಆಚರಿಸುವ ವಿಜಯದಶಮಿ.
ಈ ಹತ್ತು ದಿನಗಳಲ್ಲಿ ಯಾವುದೇ ಒಳ್ಳೆಯ ಕೆಲಸ ಆರಂಭಿಸಲು ಪಂಚಾಂಗ ನೋಡುವ ಅಗತ್ಯವಿಲ್ಲ. ದಸರಾ ಹಬ್ಬದಲ್ಲಿ ನವರಾತ್ರಿ, ಆಯುಧ ಪೂಜೆ ಹಾಗೂ ವಿಜಯದಶಮಿ ಪ್ರಮುಖವಾದವು.