ಮಂಗಳವಾರ ಹನುಮಂತನಿಗೆ ವಿಶೇಷ ಪೂಜೆ ಮಾಡಲಾಗುತ್ತದೆ. ಹಾಗೆ ನವರಾತ್ರಿಯಂದು ತಾಯಿ ದುರ್ಗೆಯ ಆರಾಧನೆ ನಡೆಯುತ್ತದೆ. ನವರಾತ್ರಿಯ ಮಂಗಳವಾರ ತಾಯಿ ದುರ್ಗೆ ಜೊತೆ ಹನುಮಂತನಿಗೂ ಪೂಜೆ ಮಾಡಲಾಗುತ್ತದೆ. ಹೀಗೆ ಮಾಡಿದಲ್ಲಿ ಶನಿದೋಷ ದೂರವಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹನುಮಂತನ ಭಕ್ತರಿಗೆ ಶನಿಯ ಕೆಟ್ಟ ದೃಷ್ಟಿ ಬೀಳೋದಿಲ್ಲವಂತೆ. ನವರಾತ್ರಿಯಂದು ಹನುಮಂತನಿಗೆ ಈ ರೀತಿ ಪೂಜೆ ಮಾಡುವುದ್ರಿಂದ ಶನಿ ದೋಷದಿಂದ ಮುಕ್ತಿ ಪಡೆಯಬಹುದಾಗಿದೆ. ಮೊದಲನೆಯದಾಗಿ ಹನುಮಂತನಿಗೆ ಕೆಂಪು ಬಟ್ಟೆ, ಸಿಂಧೂರ, ಮಲ್ಲಿಗೆ ಎಣ್ಣೆಯನ್ನು ಅರ್ಪಿಸಿ.
ಎರಡನೇ ಉಪಾಯವೆಂದ್ರೆ ಹನುಮಂತನ ಮುಂದೆ ತೆಂಗಿನ ಕಾಯಿಯನ್ನು ತೆಗೆದುಕೊಂಡು ನಿಮ್ಮ ತಲೆಗೆ ಏಳು ಸುತ್ತು ಹಾಕಿಸಿ ಕಾಯಿಯನ್ನು ದೇವರ ಮುಂದೆ ಒಡೆಯಿರಿ. ದುಃಖ ಕಡಿಮೆ ಮಾಡುವಂತೆ ಪ್ರಾರ್ಥಿಸಿ.
ಮಂಗಳವಾರ ಕಪಿದೇವನಿಗೆ ಬೆಲ್ಲ ಹಾಗೂ ಕಬ್ಬನ್ನು ನೀಡಿ.
ನಾಲ್ಕನೇ ಉಪಾಯವಾಗಿ ಓಂ ರಾಮದೂತಾಯ ನಮಃ ಮಂತ್ರವನ್ನು 108 ಬಾರಿ ಜಪಿಸಿ.
ಹನುಮಂತನ ಮುಂದೆ ಮಲ್ಲಿಗೆ ಎಣ್ಣೆಯ ದೀಪವನ್ನು ಹಚ್ಚಿ. ಹನುಮಾನ್ ಚಾಲೀಸ್ ಓದಿ.