ಮನುಷ್ಯನ ವಯಸ್ಸು 60ರ ಹತ್ತಿರ ಬಂದರೆ ಸಾಕು, ವಯಸ್ಸಾಯ್ತು ಅನ್ನೋ ಚಿಂತೆ ಕಾಡೋದಕ್ಕೆ ಶುರುವಾಗಿ ಬಿಡುತ್ತೆ. ಬಿಪಿ, ಶುಗರ್ ಮಾತ್ರೆ ಲೆಕ್ಕ ಹಾಕಿ ನುಂಗ್ತಾನೇ ಜೀವನ ಕಳೆದುಬಿಡ್ತಾರೆ.
ಹಾಗಂತ ಎಲ್ಲರೂ ಹೀಗೆನೇ ಇರ್ತಾರೆ ಅಂತ ಅಂದ್ಕೊಳ್ಳೊದಕ್ಕೆ ಹೋಗ್ಬೇಡಿ. ಕೆಲವರು ವಯಸ್ಸು, ದೇಹಕ್ಕೆ ಆಗುತ್ತೆಯೇ ಹೊರತು ಮನಸ್ಸಿಗಲ್ಲ ಅಂತ ಹೇಳ್ತಾರೆ. ಆ ಮಾತು ನಿಜ ಅಂತ ಪ್ರೂಫ್ ಮಾಡಿದ್ದಾರೆ, ಅಮೆರಿಕಾದ 71 ವರ್ಷದ ಪಾಟ್.
ಪಾಟ್ ಅವರ ಜೀವನೋತ್ಸಾಹವನ್ನ ನೋಡ್ತಿದ್ರೆ ಯುವಕರು ಕೂಡಾ ನಾಚುವಂತಿದೆ. 71 ವರ್ಷದ ಪಾಟ್, ಈ ವಯಸ್ಸಲ್ಲೂ 4ಸಾವಿರ ಕಿಲೋಮೀಟರ್ ನಡೆದು ಎಲ್ಲರ ಹೃದಯವನ್ನ ಗೆದ್ದಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಈಗ ಇವರ ಸಾಧನೆಯದ್ದೇ ಚರ್ಚೆ. ಈ ವಯಸ್ಸಲ್ಲೂ ಇದು ಸಾಧ್ಯನಾ ಅಂತ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಆಟಿ ಮತ್ತು ಕ್ರಿಸ್ ಅನ್ನುವವರು ಪಾಟ್ ಅವರ ವಿಡಿಯೋವನ್ನ ಶೇರ್ ಮಾಡಿಕೊಂಡಿದ್ದಾರೆ. ಇವರು ಕೂಡಾ ಟ್ರಕ್ಕಿಂಗ್ ಅಂತ ಹೋದಾಗ ದಾರಿ ಮಧ್ಯದಲ್ಲಿ ಸಿಕ್ಕ ಪಾಟ್ ಅವರನ್ನ ಮಾತನಾಡಿಸಿದಾಗಲೇ ಗೊತ್ತಾಗಿದ್ದು, ಇವರು ಮಾಡಿರುವ ಸಾಧನೆ ಏನು ಅನ್ನೊದನ್ನ ಇವರು ಹೇಳಿಕೊಂಡಿದ್ದಾರೆ.
ಸುಮಾರು 2,653 ಮೈಲುಗಳನ್ನ ಹೆಜ್ಜೆ ಹಾಕಿಕೊಂಡು ಬಂದಿರುವ ಪಾಟ್ ಈಗ ಫೆಸಿಫಿಕ್ ಕ್ರೆಸ್ಟ್ ಟ್ರೆಲ್ನ ಉತ್ತರಭಾಗದತ್ತ ತಮ್ಮ ಪಯಣ ಬೆಳೆಸಿದ್ದಾರೆ. ಎಷ್ಟೋ ಜನರಿಗೆ ಇವರು ಮಾಡಿರುವ ಸಾಧನೆ ನಂಬಲು ಸಾಧ್ಯವಾಗುತ್ತಿಲ್ಲವಂತೆ. ಅದರಲ್ಲೂ ಈ ವಯಸ್ಸಿನಲ್ಲಿ ಸಾಧ್ಯವೇ ಇಲ್ಲ ಎಂದು ಹೇಳುತ್ತಾರೆ.
ಇನ್ಸ್ಟಾಗ್ರಾಮ್ನಲ್ಲಿ ಪಾಟ್ ಅವರ ವಿಡಿಯೋ ಪೋಸ್ಟ್ ಮಾಡಿರುವ ಆ್ಯಟಿ ಮತ್ತು ಕ್ರಿಸ್ ಶೀರ್ಷಿಕೆಯಲ್ಲಿ 71 ವರ್ಷದ ಪಾಟ್ ಅವರನ್ನ ಯಾರೇ ಭೇಟಿಯಾದರೂ ಅವರು ಕ್ಷಣಮಾತ್ರದಲ್ಲೇ ಆಪ್ತರೆನೆಸಿ ಬಿಡುತ್ತಾರೆ. ಅವರ ಚಿನ್ನದಂತ ಹೃದಯ, ಮಗುವಿನಂತ ಮನಸ್ಸು ಮತ್ತು ಅವರಲ್ಲಿರುವ ಜೀವನೋತ್ಸಾಹ ಇವೆಲ್ಲವೂ ಯುವಜನತೆಗೆ ಮಾದರಿಯಾಗಿದೆ. ಇವರಿಗೆ ಧನ್ಯವಾದ ಎಂದು ಬರೆದುಕೊಂಡಿದ್ದಾರೆ.
ಈ ವಯಸ್ಸಲ್ಲೂ ಇವರು ಮಾಡಿರುವ ಸಾಧನೆ ನಿಜಕ್ಕೂ ಪ್ರಶಂಸನೀಯ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.