ನವರಾತ್ರಿಯ ಎಂಟನೇಯ ದಿನದಂದು ಮಹಾ ಗೌರಿಯನ್ನು ಆರಾಧಿಸಲಾಗುತ್ತದೆ. ಮಹಾಗೌರಿಯ ಆರಾಧನೆಯಿಂದ ಪಾಪಗಳೆಲ್ಲಾ ನಿವಾರಣೆಯಾಗಿ ಮನಸ್ಸು ಪ್ರಫುಲ್ಲವಾಗುತ್ತದೆ ಎಂಬ ನಂಬಿಕೆ ಇದೆ. ಬುದ್ಧಿ ಮತ್ತು ಶಾಂತಿಯ ಪ್ರತೀಕವಾಗಿ ಮಹಾಗೌರಿಯನ್ನು ಪೂಜಿಸಲಾಗುತ್ತದೆ.
ಬಿಳಿಯ ಬಣ್ಣದ ವಸ್ತ್ರ ಧರಿಸಿರುವ ಮಹಾಗೌರಿಯು ಗೂಳಿಯ ಮೇಲೆ ಕುಳಿತುಕೊಂಡು ಒಂದು ಕೈಯಲ್ಲಿ ತ್ರಿಶೂಲ ಇನ್ನೊಂದು ಕೈಯಲ್ಲಿ ಢಮರುಗವನ್ನು ಹಿಡಿದುಕೊಂಡಿರುತ್ತಾಳೆ. ಈ ಸ್ವರೂಪದಲ್ಲಿ ತಾಯಿಯ ಮುಖವು ಚಂದ್ರನಂತೆ ಹೊಳೆಯುತ್ತಿರುತ್ತದೆ. ಮಹಾಗೌರಿಯ ಆರಾಧನೆಯಿಂದ ಸಮಸ್ಯೆಗಳು ನಿವಾರಣೆಯಾಗಿ ನೆಮ್ಮದಿಯನ್ನು ದಯಪಾಲಿಸುತ್ತಾಳೆ.
ಮಹಾಗೌರಿಗೆ ದುಂಡು ಮಲ್ಲಿಗೆ ಹೂ ಎಂದರೆ ಬಹಳ ಪ್ರೀತಿ. ನೀಲಿ ಬಣ್ಣದ ಉಡುಪು ಧರಿಸಿ ತಾಯಿಗೆ ಪೂಜೆ ಮಾಡಿದರೆ ಒಳ್ಳೆಯ ಫಲ ಸಿಗುತ್ತದೆ. ಹಾಗೇ ತಾಯಿಗೆ ತೆಂಗಿನಕಾಯಿ ಉಪಯೋಗಿಸಿ ಮಾಡಿದ ಪಾಯಸವನ್ನು ನೈವೇದ್ಯವಾಗಿ ಇಡಬೇಕು.