ಕೋಲಾರ: ಮಹಿಳಾ ತಹಶೀಲ್ದಾರರೊಬ್ಬರ ವೈಯಕ್ತಿಕ ಜೀವನದ ಬಗ್ಗೆ ಆರ್ ಟಿ ಐ ಅಡಿಯಲ್ಲಿ ಮಾಹಿತಿ ಕೇಳಿದ್ದ ಆರ್ ಟಿ ಐ ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮಂಡಿಕಲ್ ನಾಗರಾಜ್ ಬಂಧಿತ ಆರ್ ಟಿ ಐ ಕಾರ್ಯಕರ್ತ.
ಶೋಭಿತಾ ಅವರಿಗೆ ಇದುವರೆಗೂ ಎಷ್ಟು ಮದುವೆಯಾಗಿದೆ..? ಯಾರೊಂದಿಗೆ ವಿಚ್ಛೇದನ ಆಗಿದೆ..? ಸದ್ಯ ಯಾರ ಜೊತೆ ಸಂಸಾರ ಮಾಡುತ್ತಿದ್ದಾರೆ ? ಹೀಗೆ ಅನೇಕ ವಿಚಾರಗಳನ್ನು ಆರ್ ಟಿ ಐ ಅರ್ಜಿ ಹಾಕಿ ಕೇಳಿದ್ದಾರೆ. ಜೊತೆಗೆ ಅವರ ಲಗ್ನ ಪತ್ರಿಕೆ, ಮದುವೆ ಆದ ಸ್ಥಳ ಹೀಗೆ ಅನೇಕ ವಿಚಾರ ಕೇಳಿದ್ದಾರೆ.
ಇತ್ತ ಅವರು ಮಾಹಿತಿ ಕೇಳ್ತಾ ಇದ್ದ ಹಾಗೆ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮಾಹಿತಿ ಹಕ್ಕು ಅಧಿನಿಯಮದಡಿ ನಾಗರಾಜ್ನನ್ನು ಇದೀಗ ಮುಳಬಾಗಿಲು ನಗರ ಪೊಲೀಸರು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎನ್ನಲಾಗಿದೆ.