ರಾತ್ರಿ ಪಾರ್ಟಿಯಲ್ಲಿ ಅಧಿಕವಾಗಿ ಕುಡಿದಿದ್ದರೆ ಮರುದಿನ ಬೆಳಿಗ್ಗೆ ಏನು ಸೇವಿಸುತ್ತೀರೋ ಅದು ಬಹಳ ಮುಖ್ಯವಾದ ಆಹಾರವಾಗಿರುತ್ತದೆ. ಹ್ಯಾಂಗೋವರ್ ನಿವಾರಿಸಲು ಈ ಆಹಾರವೇ ಮದ್ದು. ಅಂತಹ ಕೆಲವು ಮುಖ್ಯವಾದ ಆಹಾರ ಪದಾರ್ಥಗಳು ಇಲ್ಲಿವೆ.
ಮುಖ್ಯವಾಗಿ ಎಳನೀರು, ಆಲ್ಕೋಹಾಲ್‌ನಿಂದ ಆದ ಡಿಹೈಡ್ರೇಶನ್ ನಿವಾರಿಸಿ ಅದರಲ್ಲಿನ ಎಲೆಕ್ರೋಲೈಟ್ ಚೈತನ್ಯ ನೀಡುತ್ತದೆ. ಮೊಟ್ಟೆ ಇಲ್ಲವೇ ಬೀನ್ಸ್ ತಿಂದರೆ ದೇಹಕ್ಕೆ ಬೇಕಾಗುವ ಪ್ರೊಟೀನ್ ಸಿಗುತ್ತದೆ.
ಶುಂಠಿಯನ್ನು ಬಿಸಿ ನೀರಿನಲ್ಲಿ ಸೇರಿಸಿ ಕುಡಿದರೆ ವಾಂತಿ ನಿಲ್ಲುತ್ತದೆ. ಜೇನುತುಪ್ಪ ಸೇವಿಸಿದರೆ ಅದು ದೇಹದಲ್ಲಿನ ಆಲ್ಕೋಹಾಲ್ ತೆಗೆಯುತ್ತದೆ.
ಕೊನೆಗೆ ದೇಹಕ್ಕೆ ಬೇಕಾಗುವ ಶಕ್ತಿ ಹಾಗೂ ಪೌಷ್ಟಿಕಾಂಶ ಸಿಗಲು ಒಣ ಹಣ್ಣು, ಮೊಸರು ಇಲ್ಲ ಓಟ್ಸ್ ತಿನ್ನಬೇಕು. ಈ ಆಹಾರ ಪದ್ಧತಿ ಪಾಲಿಸಿದರೆ ಹ್ಯಾಂಗೋವರ್‌ನಿಂದ ಆಗುವ ತಲೆನೋವು, ಹೊಟ್ಟೆಯಲ್ಲಿನ ತಳಮಳ ಕಡಿಮೆಯಾಗುತ್ತದೆ.