ಬಸ್ ನಿಲ್ದಾಣದಲ್ಲಿ ನೀವೇನಾದ್ರೂ ಮೊಬೈಲ್ ಚಾರ್ಜ್ ಹಾಕ್ತೀರಾ..? ಹಾಗಾದ್ರೆ ನೀವು ಈ ಸುದ್ದಿ ಓದಲೇ ಬೇಕು. ಇಲ್ಲೊಬ್ಬ ಆಸಾಮಿ ಬಸ್ ಸ್ಟಾಂಡ್ ನಲ್ಲಿ ಮೊಬೈಲ್ ಚಾರ್ಜ್ ಹಾಕಿ ಹಣ ಕಳೆದುಕೊಂಡ ಘಟನೆ ನಡೆದಿದೆ.
ಹೌದು, ಹೈದರಾಬಾದ್‌ನ ಕಂಪನಿಯೊಂದರ ಸಿಇಒ ಒಬ್ಬರು ಬಸ್ ನಿಲ್ದಾಣದಲ್ಲಿ ಚಾರ್ಜ್ ಹಾಕಿ ತಮ್ನ ಖಾತೆಯ ಹಣ ಕಳೆದುಕೊಂಡಿದ್ದಾರೆ. ಜ್ಯೂಸ್ ಜಾಕಿಂಗ್ ಎಂಬ ವಂಚನೆ ಜಾಲಕ್ಕೆ ಸಿಲುಕಿ ತಮ್ಮ ಅಕೌಂಟ್‌ನಲ್ಲಿದ್ದ ಬರೋಬ್ಬರಿ 16 ಲಕ್ಷ ಹಣ ಕಳೆದುಕೊಂಡಿದ್ದಾರೆ. ಯುಎಸ್‌ಬಿ ಪೋರ್ಟ್ ಮೂಲಕ ಮೊಬೈಲ್ ಚಾರ್ಜ್ ಮಾಡುತ್ತಿದ್ದರಂತೆ. ಈ ವೇಳೆ ಹ್ಯಾಕರ್ ಗಳು ಡೇಟಾ ಹ್ಯಾಕ್ ಮಾಡಿ ಅದರ ಮೂಲಕ ಬ್ಯಾಂಕ್ ಖಾತೆಗೆ ಕನ್ನ ಹಾಕಿದ್ದಾರೆ.
ಯು ಎಸ್ ಬಿ ಕೇಬಲ್ ಮೂಲಕ ಚಾರ್ಜ್ ಹಾಕುವ ಮೊಬೈಲ್ ಗಳಿಗೆ ಮೊದಲು ವೈರಸ್ ಹರಡಿಸಲಾಗುತ್ತದೆ. ಈ ವೈರಸ್ ಡಾಟಾ ಕದಿಯಲು ಸಹಾಯ ಮಾಡುತ್ತದೆ. ಅದರಿಂದ ಅಕೌಂಟ್ ಹ್ಯಾಕ್ ಮಾಡಬಹುದು. ಇದನ್ನು ತಡೆಯೋದಿಕ್ಕೂ ಒಂದು ಉಪಾಯ ಇದೆ. ಎಸಿ ಪವರ್ ಸಾಕೆಟ್ ಮೂಲಕ ಡೇಟಾ ವರ್ಗಾವಣೆ ತಡೆಯಬಹುದಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕೇಬಲ್ ಮೂಲಕ ಚಾರ್ಜ್ ಹಾಕಲೇಬಾರದು ಇದರಿಂದ ಡಾಟಾ ಕಳ್ಳತನ ತಡೆಯಬಹುದು.