ಆರೋಗ್ಯಕ್ಕೆ ಬಾದಾಮಿ ಬಹಳ ಒಳ್ಳೆಯದು. ಬಾದಾಮಿಯನ್ನು ಪ್ರತಿ ದಿನ ಸೇವನೆ ಮಾಡುವುದ್ರಿಂದ ಅನೇಕ ಲಾಭಗಳಿವೆ. ಹಾಗಾಗಿಯೇ ಜನರು ಬಾದಾಮಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡ್ತಾರೆ.
ಬಾದಾಮಿ ಎಷ್ಟು ಒಳ್ಳೆಯದೋ ಅಷ್ಟೆ ಪ್ರಮಾಣದಲ್ಲಿ ಬಾದಾಮಿ ನೀರು ಕೂಡ ಆರೋಗ್ಯಕ್ಕೆ ಒಳ್ಳೆಯದು.
ಬಾದಾಮಿ ನೀರಿನ ಸೇವನೆಯಿಂದ ದೇಹ ತಂಪಾಗಿರುತ್ತದೆ. ಕೆಲ ಬಾದಾಮಿಯನ್ನು ತೆಗೆದುಕೊಂಡು ರಾತ್ರಿ ನೀರಿನಲ್ಲಿ ನೆನೆಹಾಕಿ. ಬೆಳಿಗ್ಗೆ ಬಾದಾಮಿ ತೆಗೆದು ಈ ನೀರನ್ನು ಸೇವಿಸಿ.
ಅಧಿಕ ರಕ್ತದೊತ್ತಡ ಹೃದಯದ ಮೇಲೆ ಪರಿಣಾಮ ಬೀರುತ್ತದೆ. ರಕ್ತದೊತ್ತಡದ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅನಿವಾರ್ಯ.
ಅಧಿಕ ರಕ್ತದೊತ್ತಡದಿಂದ ಬಳಲುವ ಜನರು ಬಾದಾಮಿ ನೀರನ್ನು ಸೇವಿಸಬೇಕು. ಒಂದು ವಾರಗಳ ಕಾಲ ಖಾಲಿ ಹೊಟ್ಟೆಯಲ್ಲಿ ಇದ್ರ ಸೇವನೆ ಮಾಡುವುದ್ರಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ.
ದೇಹ ದುರ್ಬಲವಾಗಿದ್ದರೆ ಬಾದಾಮಿ ನೀರಿನ ಸೇವನೆ ಶುರು ಮಾಡಿ. ಇದು ದೇಹಕ್ಕೆ ಶಕ್ತಿ ನೀಡುತ್ತದೆ. ದೇಹ ದಣಿದಿದ್ದವರು ಕೂಡ ಬಾದಾಮಿ ನೀರನ್ನು ಕುಡಿಯಬಹುದು.
ಮಕ್ಕಳಿಗೂ ಬಾದಾಮಿ ನೀರು ಬಹಳ ಒಳ್ಳೆಯದು. ನೆನಪಿನ ಶಕ್ತಿ ಕಡಿಮೆಯಿರುವವರು ಬಾದಾಮಿ ನೀರನ್ನು ಕುಡಿಯಬೇಕು. ಇದು ನೆನಪಿನ ಶಕ್ತಿ ಹೆಚ್ಚಿಸಲು ನೆರವಾಗುತ್ತದೆ.
ದೇಹದಲ್ಲಿ ಸಕ್ಕರೆ ಪ್ರಮಾಣವನ್ನು ಸಮತೋಲನದಲ್ಲಿಡಲು ಬಾದಾಮಿ ನೀರು ಒಳ್ಳೆಯದು.