ಬಾಲಿವುಡ್ ನಟ ಅನ್ನು ಕಪೂರ್‌ಗೆ ಆನ್‌ಲೈನ್‌ನಲ್ಲಿ ಲಕ್ಷಾಂತರ ರೂಪಾಯಿ ವಂಚಿಸಲಾಗಿದೆ. ಅವರ ಖಾಸಗಿ ಬ್ಯಾಂಕ್ ಖಾತೆಯಿಂದ 4.36 ಲಕ್ಷ ರೂಪಾಯಿಗಳನ್ನು ವಂಚಕರು ವಿತ್‌ಡ್ರಾ ಮಾಡಿದ್ದರು. ಆದರೆ ಪೊಲೀಸರ ತಕ್ಷಣದ ಕ್ರಮದಿಂದಾಗಿ 3.08 ಲಕ್ಷ ರೂಪಾಯಿ ಮರಳಿ ದೊರೆತಿದೆ.
ಮುಂಬೈನ ಓಶಿವಾರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಈ ಮಾಹಿತಿ ನೀಡಿದ್ದಾರೆ. ಅನಾಮಧೇಯನೊಬ್ಬ ಅನ್ನು ಕಪೂರ್‌ಗೆ ಕರೆ ಮಾಡಿ, ನಿಮ್ಮ KYC ವಿವರಗಳನ್ನು ನವೀಕರಿಸಬೇಕಾಗಿದೆ ಎಂದು ಹೇಳಿದರು. ನಂತರ ಅವರು ಅವರ ಬ್ಯಾಂಕ್ ಖಾತೆಯ ವಿವರಗಳನ್ನು ಮತ್ತು OTP ಹಂಚಿಕೊಳ್ಳಲು ಕಪೂರ್ ಅವರನ್ನು ಕೇಳಿದ್ದಾನೆ. ಅದರಂತೆ ಅನ್ನು ಕಪೂರ್ ಬ್ಯಾಂಕ್ ಡಿಟೇಲ್ಸ್ ಮತ್ತು ಓಟಿಪಿ ಕೊಟ್ಟಿದ್ದಾರೆ.
ಅದನ್ನು ಪಡೆದ ವಂಚಕ, ನಟನ 2 ಖಾತೆಗಳಿಂದ ಹಣವನ್ನು ವರ್ಗಾಯಿಸಿಕೊಂಡಿದ್ದಾನೆ. ಆದರೆ ಈ ವಹಿವಾಟಿನ ಬಗ್ಗೆ ಅನುಮಾನಗೊಂಡ ಬ್ಯಾಂಕ್ ಸಿಬ್ಬಂದಿ ತಕ್ಷಣವೇ ಅನ್ನು ಕಪೂರ್‌ಗೆ ಕರೆ ಮಾಡಿದ್ದಾರೆ. 4.36 ಲಕ್ಷ ರೂಪಾಯಿ ವರ್ಗಾವಣೆಯಾಗಿರೋದಾಗಿ ತಿಳಿಸಿದ್ದಾರೆ. ಕಪೂರ್ ತಡಮಾಡದೆ ಪೊಲೀಸರನ್ನು ಸಂಪರ್ಕಿಸಿದರು. ಎರಡೂ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಯ್ತು.
3.08 ಲಕ್ಷ ರೂಪಾಯಿ ಅನ್ನು ಕಪೂರ್‌ಗೆ ವಾಪಸ್ ಸಿಗಲಿದೆ. ಆನ್‌ಲೈನ್ ವಂಚಕನನ್ನು ಪತ್ತೆ ಮಾಡುವ ಪ್ರಯತ್ನ ನಡೆಯುತ್ತಿದೆ. ವಿಕ್ಕಿ ಡೋನರ್, ಜಾಲಿ ಎಲ್‌ಎಲ್‌ಬಿ 2 ನಂತಹ ಅನೇಕ ಚಿತ್ರಗಳಲ್ಲಿ ಅನ್ನು ಕಪೂರ್ ಅಭಿನಯಿಸಿದ್ದಾರೆ. ರಾಷ್ಟ್ರೀಯ ಮತ್ತು ಫಿಲ್ಮ್‌ಫೇರ್ ಪ್ರಶಸ್ತಿಗಳಿಗೂ ಅವರು ಭಾಜನರಾಗಿದ್ದಾರೆ.