ಪ್ರಧಾನಿ ನರೇಂದ್ರ ಮೋದಿಯವರು ನಿಯಮಗಳನ್ನು ಸ್ವತಃ ತಾವು ಪಾಲಿಸುವ ಮೂಲಕ ದೇಶದ ಜನತೆಗೆ ಮೇಲ್ಪಂಕ್ತಿ ಹಾಕಿಕೊಡುತ್ತಿರುತ್ತಾರೆ. ಇದೀಗ ಅಂತಹುದೇ ಒಂದು ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ರಾಜಸ್ಥಾನದಲ್ಲಿ ರಾತ್ರಿ 10:00 ಗಂಟೆ ಬಳಿಕ ಧ್ವನಿವರ್ಧಕ ಬಳಸಬಾರದು ಎಂಬ ನಿಯಮವಿದೆ. ಜೈಪುರದ ಅಬು ರಸ್ತೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ನರೇಂದ್ರ ಮೋದಿ ಅವರು ತಡವಾಗಿ ಬಂದಿದ್ದಾರೆ.
ವೇದಿಕೆಗೆ ಬಂದ ಅವರು, ನಾನು ಇಲ್ಲಿಗೆ ಬರುವುದು ತಡವಾಗಿದೆ. ಹಾಗಾಗಿ ನಿಯಮ ಪಾಲಿಸಬೇಕಾಗಿದೆ. ಇದಕ್ಕಾಗಿ ನಾನು ನಿಮ್ಮ ಕ್ಷಮೆ ಕೋರುತ್ತೇನೆ ಎಂದು ಹೇಳಿದರಲ್ಲದೆ ಭಾಷಣ ಮಾಡದೆ ಸುಮ್ಮನಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ ಕೇಳಲೆಂದೇ ದೂರದ ಊರುಗಳಿಂದ ಬಂದಿದ್ದ ಅವರ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಇದರಿಂದ ನಿರಾಶೆಯಾದರೂ ಸಹ ನಿಯಮ ಪಾಲಿಸಿದ ಕಾರಣಕ್ಕೆ ಮೋದಿಯವರ ಮೇಲಿನ ಅಭಿಮಾನ ಮತ್ತಷ್ಟು ಜಾಸ್ತಿಯಾಗಿದೆ.