ಮರ್ಸಿಡಿಸ್ ಅತ್ಯಂತ ವಿಶಿಷ್ಟ ಫೀಚರ್‌ಗಳುಳ್ಳ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. Mercedes-Benz EQS 580 ಕಾರು ಒಮ್ಮೆ ಪೂರ್ತಿಯಾಗಿ ಚಾರ್ಜ್ ಮಾಡಿದ್ರೆ 857 ಕಿಮೀ ಚಲಿಸಬಲ್ಲ ಸಾಮರ್ಥ್ಯ ಹೊಂದಿದೆ.
ಭಾರತೀಯ ಕಂಪನಿಗಳಾದ ಟಾಟಾ ಮೋಟಾರ್ಸ್ ಮತ್ತು ಮಹೀಂದ್ರಾ, ಎಲೆಕ್ಟ್ರಿಕ್ ವಿಭಾಗದಲ್ಲಿ ಛಾಪು ಮೂಡಿಸಲು ಪ್ರಯತ್ನಿಸುತ್ತಿರುವಾಗಲೇ ಐಷಾರಾಮಿ ಕಾರು ತಯಾರಕ ಸಂಸ್ಥೆ ಮರ್ಸಿಡಿಸ್ ಪೈಪೋಟಿಗೆ ಮುಂದಾಗಿದೆ.
ಮರ್ಸಿಡಿಸ್ ದೇಶದ ವಿಶಾಲ ಶ್ರೇಣಿಯ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಇದು ಭಾರತದ ಮೊದಲ ಮೇಡ್ ಇನ್ ಇಂಡಿಯಾ ಐಷಾರಾಮಿ ಎಲೆಕ್ಟ್ರಿಕ್ ಕಾರು. ಈ ಕಾರನ್ನು ಪುಣೆ ಬಳಿಯ ಪ್ಲಾಂಟ್‌ನಲ್ಲಿ ತಯಾರಿಸಲಾಗಿದೆ. Mercedes-Benz EQS 580 ದೊಡ್ಡ 56-ಇಂಚಿನ ಡಿಸ್‌ಪ್ಲೇ ಹೊಂದಿದೆ. ಇದನ್ನು ಹೈಪರ್‌ಸ್ಕ್ರೀನ್ ಎಂದು ಕರೆಯಲಾಗುತ್ತದೆ. ವಿಶ್ವದ ಕಾರುಗಳಲ್ಲಿರುವ ಅತ್ಯಂತ ದೊಡ್ಡ ಡಿಸ್‌ಪ್ಲೇ ಇದು. ಡ್ಯಾಶ್‌ಬೋರ್ಡ್‌ನ ಉದ್ದಕ್ಕೂ ಇದು ವಿಸ್ತರಿಸುತ್ತದೆ. ಇದರಲ್ಲಿ ಡ್ರೈವರ್ ಡಿಸ್‌ಪ್ಲೇ, ಸೆಂಟರ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಮತ್ತು ಪ್ಯಾಸೆಂಜರ್ ಡಿಸ್‌ಪ್ಲೇಯನ್ನು ಒಟ್ಟಿಗೆ ಜೋಡಿಸಲಾಗಿದೆ.
ಬಳಕೆದಾರರಿಗಾಗಿ 12 ಆಕ್ಟಿವೇಟರ್‌ಗಳಿವೆ. ಎಲೆಕ್ಟ್ರಿಕ್ ಸೆಡಾನ್ 3D ನಕ್ಷೆಗಳು, ಹೆಡ್ಸ್-ಅಪ್ ಡಿಸ್‌ಪ್ಲೇ, ಬರ್ಮೆಸ್ಟರ್ 3D ಸೌಂಡ್ ಸಿಸ್ಟಮ್, ಏರ್ ಫಿಲ್ಟರೇಶನ್ ಮತ್ತು ಹಿಂಭಾಗದ ಸೀಟಿಗೆ S-ಕ್ಲಾಸ್ ತರಹದ ಟ್ಯಾಬ್ಲೆಟ್ ಅನ್ನು ಸಹ ಅಳವಡಿಸಲಾಗಿದೆ. ಈ ಕಾರಿನಲ್ಲಿ 107.8 kWh ನ ದೊಡ್ಡ ಬ್ಯಾಟರಿ ಪ್ಯಾಕ್ ಅನ್ನು ನೀಡಲಾಗಿದೆ. ಕಾರು ಕೇವಲ 4.1 ಸೆಕೆಂಡುಗಳಲ್ಲಿ 0 ರಿಂದ 100 ಕಿಮೀ ವೇಗವನ್ನು ಪಡೆಯುತ್ತದೆ.
ವಿಶೇಷವೆಂದರೆ ಈ ವಾಹನವು ಕೇವಲ 15 ನಿಮಿಷಗಳ ಚಾರ್ಜ್‌ನೊಂದಿಗೆ 300 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ. ಆದರೆ ಇದಕ್ಕಾಗಿ 200 kWh ಅಲ್ಟ್ರಾ-ಕ್ವಿಕ್ DC ಚಾರ್ಜರ್‌ನೊಂದಿಗೆ ಕಾರನ್ನು ಚಾರ್ಜ್ ಮಾಡಬೇಕಾಗುತ್ತದೆ. ಮುಂಭಾಗದಲ್ಲಿ, ಕಪ್ಪು ಫಲಕದ ರೇಡಿಯೇಟರ್ ಗ್ರಿಲ್ ಇದೆ. ಇದು LED ಹೆಡ್ ಲ್ಯಾಂಪ್‌ಗಳನ್ನು ಮತ್ತು ಕಡಿಮೆ ಆಕ್ರಮಣಕಾರಿ ಮುಂಭಾಗದ ಬಂಪರ್ ವಿನ್ಯಾಸವನ್ನು ಹೊಂದಿದೆ. 5-ಸ್ಪೋಕ್ ವಿನ್ಯಾಸದೊಂದಿಗೆ ಚಿಕ್ಕದಾದ 20-ಇಂಚಿನ ಚಕ್ರಗಳನ್ನು ಅಳವಡಿಸಲಾಗಿದೆ.
ಎಲೆಕ್ಟ್ರಿಕ್ ಸೆಡಾನ್‌ನ ಹಿಂಭಾಗವು EQS 580 ಬ್ರ್ಯಾಂಡಿಂಗ್ ಜೊತೆಗೆ Mercedes-Benz ಲೋಗೋವನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ, EQS 580ಗೆ 9 ಏರ್‌ಬ್ಯಾಗ್‌ಗಳು, ಲೇನ್ ಬದಲಾವಣೆ ಮತ್ತು ಲೇನ್ ಕೀಪ್ ಅಸಿಸ್ಟ್ ಮತ್ತು ತುರ್ತು ನಿಲುಗಡೆ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಈ ಕಾರು ಯುರೋ ಎನ್‌ಸಿಎಪಿಯಿಂದ ಫೈವ್ ಸ್ಟಾರ್ ಕ್ರ್ಯಾಶ್ ಟೆಸ್ಟ್ ರೇಟಿಂಗ್ ಅನ್ನು ಪಡೆದುಕೊಂಡಿದೆ. Audi e-tron GT ಮತ್ತು Porsche Taycan ನಂತಹ ವಾಹನಗಳಿಗೆ ಇದು ತೀವ್ರ ಪೈಪೋಟಿ ಒಡ್ಡುವುದರಲ್ಲಿ ಅನುಮಾನವಿಲ್ಲ.