ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ವಿಂಟೇಜ್ ಕಾರ್ ಶೋ ಮತ್ತು ರ್ಯಾಲಿಗೆ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಚಾಲನೆ ನೀಡಿದರು.
ಹೆಬ್ಬಾಳ್ ಇಂಡಸ್ಟ್ರಿಯಲ್ ಏರಿಯಾದಲ್ಲಿ ಆಯೋಜಿಸಿರುವ ವಿಂಟೇಜ್ ಕಾರ್ ಶೋ ಮತ್ತು ರ್ಯಾಲಿಗೆ ಚಾಲನೆ ದೊರೆತಿದ್ದು, 80, 100 ವರ್ಷ ಹಳೆಯದಾದ ಮ್ಯಾರಿಸ್ ಮೈನರ್, ಅಸ್ಟಿನ್, ರೋಡ್ ಮಾಸ್ಟರ್, ರೋಲ್ಸ್ ರಾಯ್ಸ್ ಸೇರಿದಂತೆ ನಾನಾ ಮಾಡೆಲ್ ಕಾರುಗಳು ಮತ್ತು ಸ್ಕೂಟರ್ ಗಳು ಕಣ್ಮನ ಸೆಳೆಯುತ್ತಿದೆ. ಇದೇ ವೇಳೆ ಸಚಿವರು ವಿಂಟೇಜ್ ಕಾರಿನಲ್ಲಿ ಸಂಚರಿಸಿ ಸಂಭ್ರಮಿಸಿದರು.
ಈ ವೇಳೆ ಮಾತನಾಡಿದ ಸಚಿವರು, ಇಷ್ಟೊಂದು ಬಗೆಬಗೆಯ ವಿಂಟೇಜ್ ಕಾರುಗಳನ್ನು ಹೊಂದಿರುವ ಉದ್ಯಮಿ ಗೋಪಿನಾಥ್ ಶೆಣೈ ಅವರಿಗೆ ಸರ್ಕಾರದ ಪರವಾನಗಿ ಅಭಿನಂದನೆಗಳು. ಅಮೆರಿಕ, ಆಸ್ಟ್ರೇಲಿಯಾ, ಜರ್ಮನಿ ಸೇರಿದಂತೆ ನಾನಾ ದೇಶಗಳ ತರಹೇವಾರಿ ಕಾರುಗಳು ಒಂದಕ್ಕಿಂತ ಒಂದು ವಿಭಿನ್ನವಾಗಿದೆ. 80, 100 ವರ್ಷಗಳ ಹಳೆಯ ಕಾರುಗಳ ನಿರ್ವಹಣೆ ಮಾಡುವುದು ಸುಲಭದ ಕೆಲಸವಲ್ಲ ಎಂದರು.