ಜೀವನದಲ್ಲಿ ಕೆಲ ಚಿಕ್ಕ-ಚಿಕ್ಕ ವಿಚಾರ ನಗು ಉಕ್ಕಿಸಿ ಬಿಡುತ್ತೆ. ಅಷ್ಟೇ ಅಲ್ಲ ಜೀವನ ಪರ್ಯಂತ ಅದು ನೆನಪಿಟ್ಟುಕೊಳ್ಳುವ ಹಾಗೆ ಮಾಡುತ್ತೆ. ಇತ್ತೀಚೆಗೆ ಸೋಶಿಯಲ್ ಮಿಡಿಯಾದಲ್ಲಿ ಅಂತಹದ್ದೇ ಒಂದು ಪ್ರಸಂಗ ವೈರಲ್ ಆಗುತ್ತಿದೆ.
ಸಾಮಾನ್ಯವಾಗಿ ಆಟೋದಲ್ಲಿ ಓಡಾಡುವಾಗ, ಕ್ಯಾಬ್ನಲ್ಲಿ ಓಡಾಡುವಾಗ ಡ್ರೈವರ್ಗಳ ಜೊತೆ ಸಂಭಾಷಣೆ ಮಾಡುವಂತಹ ಸಂದರ್ಭ ಬರುತ್ತೆ. ಆ ಸಂಭಾಷಣೆ ಕೆಲವೊಮ್ಮೆ ವಾದಗಳಾಗಿ ಗಲಾಟೆ ರೂಪ ಪಡೆದಿದ್ದು ಇದೆ. ಇನ್ನೂ ಕೆಲವೊಮ್ಮೆ ತಮಾಷೆಯಾಗಿರುತ್ತೆ. ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರೋ ಫೋಟೋ ಉಬರ್ ಕ್ಯಾಬ್ನದ್ದಾಗಿದ್ದು, ಇಲ್ಲಿ ಕ್ಯಾಬ್ ಡ್ರೈವರ್ ಸೀಟ್ ಹಿಂದೆ ಬರೆದುಕೊಂಡಿದ್ದನ್ನ ಓದ್ತಿದ್ರೆ ಎಂಥವರಿಗೂ ನಗು ಉಕ್ಕಿಸುವ ಹಾಗಿದೆ.
‘ನನ್ನನ್ನ ಅಂಕಲ್, ಅಣ್ಣ ಅಂತ ಕರೆಯುವ ಅವಶ್ಯಕತೆ ಇಲ್ಲ’ ಎಂದು ಬರೆದುಕೊಂಡಿದ್ದಾರೆ. ಸಾಮಾನ್ಯವಾಗಿ ಆಟೋ ಚಾಲಕರಿರಬಹುದು ಇಲ್ಲಾ ಕ್ಯಾಬ್ ಚಾಲಕರಿರಬಹುದು. ಅವರನ್ನ ಜನರು ಅಣ್ಣ ಅಂತಾನೋ ಇಲ್ಲ ಅಂಕಲ್ ಅಂತ ಕರೆಯುತ್ತಾರೆ. ಈ ಕ್ಯಾಬ್ ಡ್ರೈವರ್ಗೂ ಅದೇ ಅನುಭವ ಆಗಿರಬಹುದು. ಅದಕ್ಕೆ ಕೊನೆಗೆ ಈ ಐಡಿಯಾ ಕಂಡು ಹಿಡಿದಿದ್ದಾರೆ.
ಸೊಹಿನಿ ಅನ್ನುವವರು ಈ ಫೋಟೋವನ್ನ ತಮ್ಮ ಟ್ವಿಟ್ಟರ್ ಅಕೌಂಟ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಹುಡುಗಿಯರಿಗೆ ಹೇಗೆ ಆಂಟಿ ಅಂತ ಕರೆಸಿಕೊಳ್ಳುವ ಮನಸ್ಸಿರುವುದಿಲ್ಲವೋ, ಬಹುಶಃ ಇವರಿಗೂ ಅಂಕಲ್, ಅಣ್ಣ ಅಂತ ಕರೆಸಿಕೊಳ್ಳುವುದಕ್ಕೆ ಇಷ್ಟ ಇಲ್ಲ ಅಂತ ಈ ಉಪಾಯ ಕಂಡು ಹಿಡಿದಿರಬಹುದು ಅಂತ ಒಬ್ಬರು ಕಾಮೆಂಟ್ ಬರೆದಿದ್ದಾರೆ, ಇನ್ನೊಬ್ಬರು ನಾನು ಅಣ್ಣ, ಅಂಕಲ್ ಅನ್ನೋಲ್ಲ ಬಾಸ್ ಅಂತ ಕರಿತೇನೆ ಎಂದು ನೆಟ್ಟಿಗರು ಕಾಮೆಂಟ್ ಬಾಕ್ಸ್ನಲ್ಲಿ ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ ವೈರಲ್ ಆಗಿರುವ ಈ ಫೋಟೋ ಕೆಲ ಕ್ಷಣದವರೆಗೆ ನಗೆ ಉಕ್ಕಿಸೋದಂತೂ ಗ್ಯಾರಂಟಿ.