ಶಾಲಾ ಮಕ್ಕಳಿಗೆ ಉತ್ತಮ ಪೋಷಕಾಂಶ ಭರಿತ ಆಹಾರವನ್ನು ಒದಗಿಸುವ ದೃಷ್ಟಿಯಿಂದ ಬಿಸಿಯೂಟ ಯೋಜನೆ ಆರಂಭಿಸಲಾಯಿತು. ಈ ಯೋಜನೆಯಿಂದಾಗಿ ವಿದ್ಯಾರ್ಥಿಗಳಿಗೆ ಉತ್ತಮ ಹಾಗೂ ಪೌಷ್ಠಿಕಯುಕ್ತ ಆಹಾರ ಲಭ್ಯವಾಗುತ್ತಿದೆ. ಆದರೆ ಕೆಲವರ ನಿರ್ಲಕ್ಷ್ಯದಿಂದ ಮಕ್ಕಳಿಗೆ ಊಟದ ನೆಪದಲ್ಲಿ ಕಳಪೆ ಮಟ್ಟದ ಆಹಾರ ತಿನ್ನುವುದಕ್ಕೆ ಸಿಗುತ್ತಿದೆ.
ಉತ್ತರಪ್ರದೇಶದ ಅಯೋಧ್ಯೆಯ ಪ್ರಾಥಮಿಕ ಶಾಲೆಯೊಂದರಲ್ಲಿ ಅಕ್ಕಿ-ಉಪ್ಪನ್ನಷ್ಟೇ ವಿದ್ಯಾರ್ಥಿಗಳಿಗೆ ಕೊಡುವುದು ಗಮನಕ್ಕೆ ಬಂದಿದೆ. ಈ ಊಟದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಸದ್ಯಕ್ಕೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಶಾಲೆಯ ಪ್ರಾಂಶುಪಾಲರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿ ಗ್ರಾಮದ ಮುಖ್ಯಸ್ಥರಿಗೆ ನೊಟೀಸ್ ಕಳುಹಿಸಿದ್ದಾರೆ.
ವೈರಲ್ ಆಗಿರುವ ಶಾಲೆಯ ವಿಡಿಯೋದಲ್ಲಿ ಮಧ್ಯಾಹ್ನದ ಊಟ ಮಾಡುವ ಮಕ್ಕಳು ಬೇಯಿಸಿದ ಅನ್ನ ಮತ್ತು ಉಪ್ಪನ್ನು ವಿಡಿಯೊಗ್ರಾಫರ್ ದಿನದ ಮೆನುವನ್ನು ಸಹ ತೋರಿಸುತ್ತಾರೆ. ಜೊತೆಗೆ ಅಂದು ಮಕ್ಕಳಿಗೆ ಕೊಡಲಾದ ಊಟವನ್ನು ಸಹ ವಿಡಿಯೋದಲ್ಲಿ ಕಾಣಿಸುತ್ತಾರೆ.
ಈ ವಿಷಯ ಕುರಿತು ಅಯೋಧ್ಯೆಯ ಜಿಲ್ಲಾ ಮ್ಯಾಜಿಸ್ಟ್ರೇಟ್ ನಿತೀಶ್ ಕುಮಾರ್ ಅವರು ಅಯೋಧ್ಯೆಯ ಚೌರೆಬಜಾರ್ ಪ್ರದೇಶದಲ್ಲಿರುವ ದಿಹ್ವಾ ಪಾಂಡೆ ಅವರ ಪ್ರಾಥಮಿಕ ಶಾಲೆಯ ಪ್ರಾಂಶುಪಾಲ ಏಕ್ತಾ ಯಾದವ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಗ್ರಾಮದ ಮುಖ್ಯಸ್ಥರಿಗೆ ನೊಟೀಸ್ ಕಳುಹಿಸಿದ್ದಾರೆ.