ನವರಾತ್ರಿಯಂದು ದುರ್ಗಾ ಮಾತೆಯ ಒಂಬತ್ತು ಅವತಾರಗಳನ್ನು ಒಂದೊಂದು ದಿನ ಪೂಜಿಸಲಾಗುತ್ತದೆ. ಇಂದು ನವರಾತ್ರಿಯ ಆರನೇ ದಿನ. ಕಾತ್ಯಾಯಿನಿ ದೇವಿಯನ್ನು ಪೂಜಿಸಿ ಆರಾಧಿಸಲಾಗುತ್ತದೆ.
ಕಾತ್ಯಾಯನ ಮಹರ್ಷಿಯ ಮಗಳಾಗಿ ಜನಿಸಿದ ಪಾರ್ವತಿ ದೇವಿಯನ್ನು ಕಾತ್ಯಾಯಿನಿ ಎಂಬ ಹೆಸರಿನಿಂದ ಕರೆಯುತ್ತಾರೆ. ತನ್ನ ಹತ್ತು ಕೈಗಳಲ್ಲಿ ಆಯುಧಗಳನ್ನು ಹಿಡಿದಿರುವ ತಾಯಿ ಶತ್ರು ಸಂಹಾರ ಮಾಡುತ್ತಾ ಭಕ್ತರನ್ನು ಕಾಪಾಡುತ್ತಾಳೆ. ಈ ದೇವಿಯ ಆರಾಧನೆಯಿಂದ ಸಮೃದ್ಧಿ ಹಾಗೂ ಸಂಪತ್ತು ಹೆಚ್ಚಾಗುತ್ತದೆ.
ಕೆಂಪು ಗುಲಾಬಿ ಹೂವು ಕಾತ್ಯಾಯಿನಿ ಮಾತೆಗೆ ತುಂಬಾ ಇಷ್ಟವಾದದ್ದು. ಜೇನುತುಪ್ಪ ಹಾಗೂ ಹಾಲಿನಿಂದ ಮಾಡಿದ ಸಿಹಿಯನ್ನು ನೈವೇದ್ಯವಾಗಿಟ್ಟರೆ ತಾಯಿಯ ಅನುಗ್ರಹ ಸಿಗುತ್ತದೆ. ಹಾಗೇ ಕೆಂಪು ಅಥವಾ ಹಳದಿ ಬಣ್ಣ ತಾಯಿಗೆ ಪ್ರಿಯವಾದದ್ದು.