2021 ರಲ್ಲಿ ರೈಲ್ವೆ ಕ್ರಾಸಿಂಗ್ ನಲ್ಲಿ ನಡೆದ ಅಪಘಾತದಲ್ಲಿ ದಿನಕ್ಕೆ ಸರಾಸರಿ ಐದು ಮಂದಿಯಂತೆ ಒಟ್ಟು 1,807 ಜನ ಸಾವನ್ನಪ್ಪಿದ್ದು, ಈ ಪೈಕಿ ಉತ್ತರ ಪ್ರದೇಶದಲ್ಲಿ ಅಧಿಕ ಮಂದಿ ಸಾವಿಗೀಡಾಗಿದ್ದಾರೆ. ಇಲ್ಲಿ ದಿನಕ್ಕೆ ಎರಡು ಮಂದಿ ಮೃತಪಟ್ಟಿದ್ದಾರೆ ಎಂದು ಅಧ್ಯಯನ ವರದಿಯೊಂದರಲ್ಲಿ ಬಹಿರಂಗವಾಗಿದೆ.
ಕಳೆದ ವರ್ಷ ದೇಶದಲ್ಲಿ 1,550 ರೈಲ್ವೆ ಕ್ರಾಸಿಂಗ್ ಅಪಘಾತಗಳು ಸಂಭವಿಸಿದ್ದು ಒಟ್ಟು 1,807 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಉತ್ತರ ಪ್ರದೇಶ ಒಂದರಲ್ಲೇ 575 ರೈಲ್ವೆ ಕ್ರಾಸಿಂಗ್ ಅಪಘಾತದಲ್ಲಿ 875 ಮಂದಿ ಸಾವಿಗೀಡಾಗಿದ್ದಾರೆ. ಸಾವನ್ನಪ್ಪಿದವರ ಪೈಕಿ 1,493 ಪುರುಷರು ಹಾಗೂ 314 ಮಹಿಳೆಯರು ಎಂದು ವರದಿ ತಿಳಿಸಿದೆ.
ಶೇ.37.1 ರೈಲ್ವೆ ಕ್ರಾಸಿಂಗ್ ಅಪಘಾತದ ಪ್ರಕರಣಗಳೊಂದಿಗೆ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿ ಮಧ್ಯಪ್ರದೇಶ (ಶೇ.12.6) ಹಾಗೂ ಪಶ್ಚಿಮ ಬಂಗಾಳ (ಶೇ.10.6) ರಾಜ್ಯಗಳು ಇವೆ.
ಇನ್ನು ದೇಶದಲ್ಲಿ ಸಾವನಪ್ಪಿದವರ ಒಟ್ಟು 1,807 ಮಂದಿ ಪೈಕಿ, ಉತ್ತರ ಪ್ರದೇಶದಲ್ಲಿ 875, ಮಧ್ಯಪ್ರದೇಶದಲ್ಲಿ 196, ಬಿಹಾರದಲ್ಲಿ 163 ಮಂದಿ ಸಾವಿಗೀಡಾಗಿದ್ದಾರೆ.