ಕ್ರೀಡೆ ಹಾಗೂ ಸಿನಿಮಾ ತಾರೆಯರಿಗೆ ಅಭಿಮಾನಿಗಳ ದಂಡೇ ಇರುತ್ತದೆ. ಅದರಲ್ಲೂ ಕೆಲವು ಅಭಿಮಾನಿಗಳಂತೂ ಅತಿಯಾದ ಸ್ಥಾನ ಕೊಟ್ಟು ಬಿಟ್ಟಿರುತ್ತಾರೆ.
ಫ್ರಾನ್ಸಿಸ್ಕೊ ರಾನಿಯೇರಿ ಪುಟ್ಬಾಲ್ ತಾರೆ ಮೆಸ್ಸಿಯ ದೊಡ್ಡ ಅಭಿಮಾನಿ, ಫ್ಲೋರಿಡಾದಲ್ಲಿ ಆಯೋಜನೆಗೊಂಡಿದ್ದ ಸೌಹಾರ್ದ ಪಂದ್ಯದ ಸಂದರ್ಭದಲ್ಲಿ ಅವರು ತಮ್ಮ ಆರಾಧ್ಯ ದೈವದ ಜೊತೆಗೆ ಆಡಲು ಅವಕಾಶವನ್ನು ಪಡೆದರು. ಅಲ್ಲಿಯೇ ಅವರು ಮೆಸ್ಸಿಯ ಹಸ್ತಾಕ್ಷರವನ್ನು ತಮ್ಮ ತೋಳಿನ ಮೇಲೆ ಪಡೆದುಕೊಂಡಿದ್ದಾರೆ.
ಆ ಅಭಿಮಾನಿ ತಮ್ಮ ಜೀವನದ ಅತ್ಯುತ್ತಮ ದಿನವನ್ನು ವಿವರಿಸುವ ಇನ್ ಸ್ಟಾಗ್ರಾಮ್ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.
ರಾನಿಯೇರಿ ನಂತರ ಆಟೋಗ್ರಾಫ್ ಅನ್ನು ತನ್ನ ತೋಳಿನ ಮೇಲೆ ಶಾಶ್ವತವಾಗಿ ಹಚ್ಚೆ ಹಾಕಿಸಿಕೊಳ್ಳಲು ಮುಂದಾದರು.
ನನ್ನ ಜೀವನದ ಅತ್ಯುತ್ತಮ ದಿನ. ನನ್ನ ಒಂದು ಕನಸನ್ನು ಪೂರೈಸಿಕೊಂಡೆ. ನಾನು ಮೆಚ್ಚುವ ಆಟಗಾರರೊಂದಿಗೆ, ನನ್ನ ರಾಷ್ಟ್ರೀಯ ತಂಡದೊಂದಿಗೆ ಪಿಚ್ ಅನ್ನು ಹಂಚಿಕೊಂಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.