alex Certify ಮದುವೆಯಾಗಿದ್ದರೂ ಮತ್ತೊಬ್ಬಳ ಜೊತೆ ಪ್ರೀತಿ; ತಾನು ಎರಡನೇ ಪತ್ನಿ ಎಂಬ ವಿಷಯ ತಿಳಿದು ಯುವತಿ ಆತ್ಮಹತ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಯಾಗಿದ್ದರೂ ಮತ್ತೊಬ್ಬಳ ಜೊತೆ ಪ್ರೀತಿ; ತಾನು ಎರಡನೇ ಪತ್ನಿ ಎಂಬ ವಿಷಯ ತಿಳಿದು ಯುವತಿ ಆತ್ಮಹತ್ಯೆ

ವ್ಯಕ್ತಿಯೊಬ್ಬ ತನಗೆ ಈಗಾಗಲೇ ಮದುವೆಯಾಗಿದ್ದರೂ ಸಹ ಅದನ್ನು ಮುಚ್ಚಿಟ್ಟು ಮತ್ತೊಬ್ಬ ಯುವತಿಯನ್ನು ಪ್ರೀತಿಸಿದ್ದು, ಆಕೆಯೊಂದಿಗೂ ವಿವಾಹ ಮಾಡಿಕೊಂಡಿದ್ದಾನೆ. ಹೊಸ ಬಾಳಿನ ಕನಸು ಕಂಡು ಬಂದ ಯುವತಿ ತನ್ನ ಪತಿಗೆ ಈಗಾಗಲೇ ಮದುವೆಯಾಗಿದೆ ಎಂಬ ವಿಷಯ ಅರಿತು ಸಾವಿಗೆ ಶರಣಾಗಿದ್ದಾಳೆ.

ಇಂಥದೊಂದು ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದ್ದು, ಪ್ರಸಾದ್ ರೆಡ್ಡಿ ಎಂಬಾತ ಆಂಧ್ರಪ್ರದೇಶದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅಲ್ಲಿಯೇ ಉದ್ಯೋಗಿಯಾಗಿದ್ದ ಬಿಕಾಂ ಪದವೀಧರೆ ಗೌತಮಿಯನ್ನು ಪ್ರೀತಿಸಿ ಮದುವೆಯಾಗಿದ್ದ.

9 ತಿಂಗಳ ಹಿಂದೆ ಇವರಿಬ್ಬರೂ ಬೆಂಗಳೂರಿಗೆ ಬಂದಿದ್ದು, ಆಗ ತನ್ನ ಪತಿಗೆ ಈ ಮೊದಲೇ ಆಯೇಷಾ ಬಾನು ಎಂಬಾಕೆಯೊಂದಿಗೆ ಮದುವೆಯಾಗಿರುವ ವಿಚಾರ ಗೌತಮಿಗೆ ಗೊತ್ತಾಗಿದೆ. ಇದರಿಂದಾಗಿ ಪತಿ-ಪತ್ನಿ ನಡುವೆ ಆಗಾಗ ಗಲಾಟೆ ನಡೆಯುತ್ತಿದ್ದು, ಇವರ ನಿವಾಸದ ಸಮೀಪದಲ್ಲಿರುವ ಪಿಜಿಯಲ್ಲಿದ್ದ ಆಯೇಷಾ ಬಾನು ಕೂಡ ಗೌತಮಿಗೆ ಕಿರುಕುಳ ನೀಡುತ್ತಿದ್ದಳು ಎನ್ನಲಾಗಿದೆ.

ಇದರಿಂದ ಬೇಸತ್ತ ಗೌತಮಿ ಕಾವೇರಿ ಲೇಔಟ್ ನ ತನ್ನ ಮನೆಯಲ್ಲಿ ಸೆಪ್ಟೆಂಬರ್ 20ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಮಾರತಳ್ಳಿ ಠಾಣೆ ಪೊಲೀಸರು ಪ್ರಸಾದ್ ರೆಡ್ಡಿ ಹಾಗೂ ಆತನ ಮೊದಲ ಪತ್ನಿ ಆಯೇಷಾ ಬಾನು ಅವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...