CBSE ಆರನೇ ತರಗತಿ ಇತಿಹಾಸ ಪಠ್ಯದಲ್ಲಿ ಚಿತ್ರ ಸಮೇತ ಶ್ರೇಣಿಕೃತ ವರ್ಣ ವ್ಯವಸ್ಥೆ ಪರಿಚಯಿಸಿದ್ದು, ಇದು ಈಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿಂದೆ ಭಾರತದಲ್ಲಿ ಜನರು ಮಾಡುತ್ತಿದ್ದ ಕೆಲಸದ ಆಧಾರದ ಮೇಲೆ ವರ್ಣ ವ್ಯವಸ್ಥೆ ಇತ್ತು ಎಂಬುದನ್ನು ಈ ಪಠ್ಯದಲ್ಲಿ ತೋರಿಸಲಾಗಿದೆ.
ಚಿತ್ರದಲ್ಲಿ ಬ್ರಾಹ್ಮಣರು ಉನ್ನತ ಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿ ಕ್ಷತ್ರಿಯ, ಬಳಿಕ ವೈಶ್ಯರಿದ್ದಾರೆ. ಕೊನೆಯಲ್ಲಿ ಸೇವಕ ವರ್ಗವಾಗಿ ಶೂದ್ರರನ್ನು ಇರಿಸಲಾಗಿದ್ದು, ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆ ಸ್ಪಷ್ಟನೆ ನೀಡಿರುವ ಸಿ.ಬಿ.ಎಸ್.ಇ. ಆಡಳಿತ ಮಂಡಳಿ, ಪಠ್ಯ ರೂಪಿಸಿರುವುದು ಸಿಂಗಾಪುರ ಮೂಲದ ಪ್ರಕಾಶನ ಎಂದು ತಿಳಿಸಿದೆ.
ಇನ್ನು ಈ ಪಠ್ಯದ ಕುರಿತಂತೆ ಕಿಡಿ ಕಾರಿರುವ ತಮಿಳು ಚಿತ್ರರಂಗದ ಖ್ಯಾತ ನಟ ಕಮಲಹಾಸನ್, ಶ್ರೇಣಿಕೃತ ಜಾತಿ ವ್ಯವಸ್ಥೆ ಪರಿಚಯಿಸಿರುವ ಕ್ರಮ ಸರಿಯಲ್ಲ ಎಂದಿದ್ದಾರೆ. ಕೂಡಲೇ ವಿವಾದಿತ ಪಠ್ಯವನ್ನು ತೆಗೆದುಹಾಕುವಂತೆ ಅವರು ಒತ್ತಾಯಿಸಿದ್ದಾರೆ.