alex Certify ‘ಹೈಬ್ರಿಡ್’ ಕೆಲಸದಲ್ಲಿ ಉದ್ಯೋಗಿಗಳ ಉತ್ಪಾದಕತೆ ಮೇಲೆ ಅನುಮಾನ; ಇಲ್ಲಿದೆ ಮೈಕ್ರೋಸಾಫ್ಟ್‌ ಸಮೀಕ್ಷೆಯ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಹೈಬ್ರಿಡ್’ ಕೆಲಸದಲ್ಲಿ ಉದ್ಯೋಗಿಗಳ ಉತ್ಪಾದಕತೆ ಮೇಲೆ ಅನುಮಾನ; ಇಲ್ಲಿದೆ ಮೈಕ್ರೋಸಾಫ್ಟ್‌ ಸಮೀಕ್ಷೆಯ ವಿವರ

ಭಾರತದಲ್ಲಿನ ಉದ್ಯೋಗಿಗಳ ಉತ್ಪಾದಕತೆ ಬಗ್ಗೆ ಸಮೀಕ್ಷೆಯೊಂದು ನಡೆದಿದೆ. ಶೇ.93ರಷ್ಟು ಉದ್ಯೋಗಿಗಳು ತಾವು ಕೆಲಸದಲ್ಲಿ ಸಾಕಷ್ಟು ಉತ್ಪಾದಕತೆ ಹೊಂದಿರೋದಾಗಿ ಅಭಿಪ್ರಾಯಪಟ್ಟಿದ್ದಾರೆ.

ಆದ್ರೆ ಶೇ.91ರಷ್ಟು ಉದ್ಯೋಗದಾತರ ಪ್ರಕಾರ ನೌಕರರನ್ನು ಹೈಬ್ರಿಡ್ ಕೆಲಸಕ್ಕೆ ಬದಲಾಯಿಸುವುದರಿಂದ ಉದ್ಯೋಗಿಗಳು ಉತ್ಪಾದಕತೆಗೆ ಹೊಡೆತ ಬಿದ್ದಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಮೈಕ್ರೋಸಾಫ್ಟ್ ನಡೆಸಿದ ಅಧ್ಯಯನದಲ್ಲಿ ಈ ಸಂಗತಿ ಬಹಿರಂಗವಾಗಿದೆ.

ಉತ್ಪಾದಕತೆಯ ಮೇಲಿನ ಈ ಹೈಪರ್-ಫೋಕಸ್ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಪರಿಣಾಮ ಬೀರುತ್ತಿದೆ. ಭಾರತದಲ್ಲಿ ಶೇ.47ರಷ್ಟು ಉದ್ಯೋಗಿಗಳು ಮತ್ತು ಶೇ.58ರಷ್ಟು ಲೀಡರ್‌ಗಳು ಈಗಾಗಲೇ ಕೆಲಸದ ಒತ್ತಡದಿಂದ ಹೈರಾಣಾಗಿದ್ದಾರೆ. ಹಾಗಾಗಿ ಉದ್ಯೋಗಿಗಳನ್ನು ವೈಯಕ್ತಿಕವಾಗಿ ಕಚೇರಿಗೆ ಹಿಂತಿರುಗಿಸುವುದು ಕಳವಳಕಾರಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹೈಬ್ರಿಡ್ ಕೆಲಸವು ಉದ್ಯೋಗಿಗಳು ಮತ್ತು ಲೀಡರ್‌ಗಳ ನಡುವೆ ಕನೆಕ್ಷನ್‌ ಇಲ್ಲದಂತೆ ಮಾಡಿದೆ ಎಂಬುದು ಅಂಕಿ-ಅಂಶಗಳಲ್ಲಿ ಸಾಬೀತಾಗಿದೆ. ಮೈಕ್ರೋಸಾಫ್ಟ್‌ನ ‘2022 ವರ್ಕ್ ಟ್ರೆಂಡ್ ಇಂಡೆಕ್ಸ್ ಪಲ್ಸ್ ರಿಪೋರ್ಟ್’ ಪ್ರಕಾರ, ಉತ್ಪಾದಕತೆ, ಹೊಣೆಗಾರಿಕೆ ಖಾತರಿಪಡಿಸುವಾಗ ಸ್ವಾಯತ್ತತೆಯನ್ನು ಹೇಗೆ ನಿರ್ವಹಿಸುವುದು, ನಮ್ಯತೆಯ ಪ್ರಯೋಜನಗಳು ಮತ್ತು ಕಚೇರಿಯ ಪಾತ್ರದ ಬಗ್ಗೆ ಭಿನ್ನಾಭಿಪ್ರಾಯವಿದೆ. ಆದಾಗ್ಯೂ, 10 ರಲ್ಲಿ 9 ಕ್ಕಿಂತ ಹೆಚ್ಚು (91%) ಭಾರತೀಯ ಉದ್ಯೋಗಿಗಳು ಸಹೋದ್ಯೋಗಿಗಳೊಂದಿಗೆ ಬೆರೆಯಲು ಸಾಧ್ಯವಾದರೆ ಕಚೇರಿಯಿಂದಲೇ ಕೆಲಸ ಮಾಡಲು ಸಿದ್ಧರಿದ್ದಾರೆ

ಕೇವಲ ಶೇ.44ರಷ್ಟು ಕಂಪನಿಗಳು ಅಪರೂಪಕ್ಕೊಮ್ಮೆ ಉದ್ಯೋಗಿಗಳ ಪ್ರತಿಕ್ರಿಯೆಯನ್ನು ಸಂಗ್ರಹಿಸುತ್ತವೆ ಎಂಬುದು ಸಹ ಅಂಕಿ-ಅಂಶಗಳಿಂದ ದೃಢಪಟ್ಟಿದೆ. ಭಾರತದಲ್ಲಿ ಕೇವಲ ಶೇ.56ರಷ್ಟು ಉದ್ಯೋಗಿಗಳು ತಮ್ಮ ಕಂಪನಿ ವರ್ಷಕ್ಕೊಮ್ಮೆ ನೌಕರರ ಪ್ರತಿಕ್ರಿಯೆಯನ್ನು ಕೇಳುತ್ತದೆ ಎಂದು ಹೇಳಿದ್ದಾರೆ.

ಇದರರ್ಥ ಭಾರತದಲ್ಲಿನ ಅರ್ಧದಷ್ಟು ಕಂಪನಿಗಳು ತಮ್ಮ ಉದ್ಯೋಗಿಗಳ ಕೆಲಸದ ಅನುಭವಗಳ ಬಗ್ಗೆ ಕೇಳುತ್ತವೆ. ಭಾರತದಲ್ಲಿನ ಸುಮಾರು ಶೇ.60ರಷ್ಟು ಉದ್ಯೋಗಿಗಳು ತಮ್ಮ ಕಂಪನಿಯಲ್ಲಿ ದೀರ್ಘಾವಧಿಗೆ ಉಳಿದುಕೊಂಡರೆ ಸಾಕಷ್ಟು ಬೆಳವಣಿಗೆಯ ಅವಕಾಶಗಳಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...