ಹಿಂದೂ ಧರ್ಮದಲ್ಲಿ ನವರಾತ್ರಿಗೆ ಮಹತ್ವದ ಸ್ಥಾನವಿದೆ. ತಾಯಿ ದುರ್ಗೆಯನ್ನು ಆರಾಧಿಸಿ, ಸುಖ ಶಾಂತಿ ನೀಡೆಂದು ಭಕ್ತರು ಪ್ರಾರ್ಥಿಸ್ತಾರೆ. ಶಾಸ್ತ್ರದ ಪ್ರಕಾರ ಪೂಜೆ ಹಾಗೂ ಭೋಜನವನ್ನು ಗುಪ್ತವಾಗಿ ಮಾಡಬೇಕು. ಪೂಜೆ ಹಾಗೂ ಭೋಜನದ ಮೇಲೆ ಬೇರೆಯವರ ಕಣ್ಣು ಬೀಳಬಾರದು. ನವರಾತ್ರಿಯಂದು ಗುಪ್ತವಾಗಿ ಮಾಡುವ ಕೆಲವೊಂದು ಕೆಲಸಗಳು ತಾಯಿ ದುರ್ಗೆಯನ್ನು ಸುಲಭವಾಗಿ ಒಲಿಸಿಕೊಳ್ಳಲು ಸಹಾಯ ಮಾಡುತ್ತದೆ.
ಒಂಭತ್ತು ದಿನಗಳ ಕಾಲವೂ ಒಂಭತ್ತು ದೇವಿಯ ರೂಪಕ್ಕೆ ಪೂಜೆ ಮಾಡಲಾಗುತ್ತದೆ. ಒಂಭತ್ತು ದಿನವೂ ಬೇರೆ ಬೇರೆ ಮಂತ್ರಗಳನ್ನು ಜಪಿಸಬೇಕಾಗುತ್ತದೆ. ಮಂತ್ರವನ್ನು 108 ಬಾರಿ ಜಪಿಸಬೇಕು. ಹೀಗೆ ಮಾಡುವುದರಿಂದ ಭಕ್ತನಿಗೆ ವಿಶೇಷ ಲಾಭ ಲಭಿಸುತ್ತದೆ. ಸಂಜೆ ತಾಯಿಯ ಪೂಜೆಯನ್ನು ವಿಶೇಷವಾಗಿ ಮಾಡಬೇಕು. ಪೂಜೆಗಿಂತ ಮೊದಲು ದುರ್ಗೆಯ ಫೋಟೋದ ಬಳಿ 9 ದೀಪಗಳನ್ನು ಹಚ್ಚಬೇಕು. ಒಂದು ಪ್ಲೇಟ್ ನಲ್ಲಿ ಸ್ವಸ್ತಿಕ್ ಬಿಡಿಸಿ, ಅದನ್ನು ದೇವಿ ಮುಂದಿಡಿ. ಪೂಜೆಗೆ ಹೂ ಹಾಗೂ ಕುಂಕುಮವನ್ನು ಅವಶ್ಯಕವಾಗಿ ಬಳಸಿ.
ನವರಾತ್ರಿಯ ಪ್ರತಿದಿನ ತುಪ್ಪದ ದೀಪವನ್ನು ತುಳಸಿ ಮುಂದೆ ಹಚ್ಚಬೇಕು. ಹಾಗೆ ನಿರ್ಗತಿಕರಿಗೆ ಗುಪ್ತವಾಗಿ ದಾನ ಮಾಡಿ. ಗುಪ್ತವಾಗಿ ಮಾಡುವ ಸಹಾಯಕ್ಕೆ ದೇವಿ ಸಂತಸಗೊಳ್ತಾಳೆ. ತಾಯಿಯ ಜೊತೆ ಎಂದೂ ಹನುಮಂತನಿರ್ತಾನೆ. ಹಾಗಾಗಿ ತಾಯಿಯ ಪೂಜೆ ಜೊತೆಗೆ ಹನುಮಂತನ ಪೂಜೆ ಮಾಡುವುದನ್ನು ಮರೆಯಬೇಡಿ.