alex Certify ಹಾಲಿವುಡ್ ಸಿನಿಮಾದಲ್ಲಿ ನಟಿಸ್ತಾರಾ ಯಶ್..? ಚರ್ಚೆಗೆ ಕಾರಣವಾಯ್ತು‌ ಅದೊಂದು ಪೋಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾಲಿವುಡ್ ಸಿನಿಮಾದಲ್ಲಿ ನಟಿಸ್ತಾರಾ ಯಶ್..? ಚರ್ಚೆಗೆ ಕಾರಣವಾಯ್ತು‌ ಅದೊಂದು ಪೋಸ್ಟ್

ನಟ ಯಶ್ ರ ಕೆಜಿಎಫ್ 2 ದೊಡ್ಡ ಮಟ್ಟದ ಯಶಸ್ಸು ಕಂಡಿತ್ತು. ದಾಖಲೆ ಮೇಲೆ ದಾಖಲೆ ಸೃಷ್ಟಿ ಮಾಡಿದ್ದ ಈ ಸಿನಿಮಾ ನಂತರ ಯಶ್ ಏನು ಮಾಡ್ತಾ ಇದ್ದಾರೆ ಅನ್ನೋ ಪ್ರಶ್ನೆ ಸದಾ ಕಾಲ ಬರ್ತಾನೆ ಇದೆ. ಯಶ್ ಅಭಿಮಾನಿಗಳ ಈ ಪ್ರಶ್ನೆಗೆ ಯಾವಾಗ ಉತ್ತರ ಸಿಗುತ್ತೋ ಗೊತ್ತಿಲ್ಲ. ಆದರೆ ಯಶ್ ಹಾಲಿವುಡ್ ನಲ್ಲಿ ನಟಿಸುತ್ತಾರಾ ಅನ್ನೋ ಮತ್ತೊಂದು ಪ್ರಶ್ನೆ ಉದ್ಭವ ಆಗಿದೆ.

ಹೌದು, ಹಾಲಿವುಡ್ ನಿರ್ದೇಶಕರ ಜೊತೆ ಯಶ್ ಕಾಣಿಸಿಕೊಂಡಿದ್ದಾರೆ. ಜೆಜೆ ಪೆರ್ರಿ ಎಂಬ ಹಾಲಿವುಡ್ ನಿರ್ದೇಶಕರ ಜೊತೆ ಯಶ್ ಕಾಣಿಸಿಕೊಂಡಿರೋದು ಅನೇಕ ಪ್ರಶ್ನೆಗೆ ಕಾರಣವಾಗಿದೆ. ಅಮೆರಿಕದಲ್ಲಿರುವ ತರನ್ ಟೆಕ್ನಿಕಲ್ ಇನೋವೇಷನ್ ಗೆ ಯಶ್ ಭೇಟಿ ನೀಡಿದ್ದಾರೆ. ಅಲ್ಲಿ ಗನ್ ಹಿಡಿದು ಶೂಟ್ ಮಾಡಿದ್ದಾರೆ. ಈ ವಿಡಿಯೋವನ್ನು ಯಶ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೋ ಜೊತೆಗೆ, ಒಂದಿಷ್ಟು ವಿಚಾರ ಹೇಳಿರುವ ಅವರು, ಗುರಿಯನ್ನು ತಲುಪಲು ಯಾವಾಗಲೂ ಒಂದು ಮಾರ್ಗವಿದೆ, ಅದನ್ನು ಗುರುತಿಸುವುದೇ ಸವಾಲು ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಜೆಜೆಪೆರ್ರಿ ಥ್ಯಾಂಕ್ಯೂ ಎಂದಿದ್ದಾರೆ.

ಇದನ್ನೆಲ್ಲಾ ನೋಡಿದ ಅಭಿಮಾನಿಗಳು ಯಶ್ ಹಾಲಿವುಡ್ ನಲ್ಲಿ ನಟಿಸ್ತಾರಾ ಅನ್ನೋ ಪ್ರಶ್ನೆ ಹಾಕಿದ್ದಾರೆ. ಇನ್ನು ಈ ಪೋಸ್ಟ್ ಆಗಲಿ ಅಥವಾ ಮುಂದಿನ ಸಿನಿಮಾ ಬಗ್ಗೆಯಾಗಲೀ ಯಶ್ ಎಲ್ಲೂ ಪ್ರತಿಕ್ರಿಯೆ ನೀಡಿಲ್ಲ. ಅದೇನೇ ಇರಲಿ ಕೆಜಿಎಫ್ ನಂತರ ಯಶ್ ಲಕ್ ಅಂತೂ ಬದಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...