alex Certify ಒಂದು ಇನ್‌ಸ್ಟಾ ಪೋಸ್ಟ್‌ಗೆ 8 ಕೋಟಿ ಗಳಿಕೆ; ಬಾಲಿವುಡ್‌ ಸ್ಟಾರ್‌ಗಳನ್ನೂ ಮೀರಿಸಿದ್ದಾರೆ ವಿರಾಟ್‌ ಕೊಹ್ಲಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದು ಇನ್‌ಸ್ಟಾ ಪೋಸ್ಟ್‌ಗೆ 8 ಕೋಟಿ ಗಳಿಕೆ; ಬಾಲಿವುಡ್‌ ಸ್ಟಾರ್‌ಗಳನ್ನೂ ಮೀರಿಸಿದ್ದಾರೆ ವಿರಾಟ್‌ ಕೊಹ್ಲಿ…!

ಕ್ರಿಕೆಟ್‌ ಲೋಕದ ಅತ್ಯಂತ ಜನಪ್ರಿಯ ಆಟಗಾರ ವಿರಾಟ್‌ ಕೊಹ್ಲಿ. ಈ ಅನುಭವಿ ಬ್ಯಾಟ್ಸ್‌ಮನ್, ಮೈದಾನದಲ್ಲಿ ಅನೇಕ ದಾಖಲೆಗಳನ್ನು ಮಾಡಿದ್ದಾರೆ. ಘಟಾನುಘಟಿ ಬೌಲರ್‌ಗಳಿಗೆ ಮಣ್ಣುಮುಕ್ಕಿಸಿದ್ದಾರೆ. ಮೈದಾನದ ಹೊರಗೆ ಕೂಡ ಕೊಹ್ಲಿ ದಾಖಲೆಗಳಿಗೆ ಲೆಕ್ಕವೇ ಇಲ್ಲ. ಇದಕ್ಕೆ ಸಾಕ್ಷಿ ಕೊಹ್ಲಿಯ ಗಳಿಕೆ. ಕೊಹ್ಲಿ ಸಾಕಷ್ಟು ಜಾಹೀರಾತುಗಳಲ್ಲಿ ಕಾಣಿಸಿಕೊಳ್ತಾರೆ, ಬ್ರಾಂಡ್‌ ಅಂಬಾಸಿಡರ್‌ ಸಹ ಆಗಿದ್ದಾರೆ. ಉದ್ಯಮ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದಾರೆ.

ಇದೀಗ ಕೊಹ್ಲಿ ಮತ್ತಷ್ಟು ದುಬಾರಿಯಾಗಿದ್ದಾರೆ ಅಂದ್ರೂ ತಪ್ಪೇನಿಲ್ಲ. ವಿರಾಟ್ ತಮ್ಮ ಪ್ರತಿ ಇನ್‌ಸ್ಟಾಗ್ರಾಮ್‌ ಪೋಸ್ಟ್‌ಗೂ ಹಣ ಪಡೆಯುತ್ತಾರೆ. ಇದೀಗ ಶುಲ್ಕವನ್ನು ಹೆಚ್ಚಿಸಿರೋ ಕೊಹ್ಲಿ ಪ್ರತಿ ಇನ್‌ಸ್ಟಾ ಪೋಸ್ಟ್‌ಗೆ ಪಡೆಯುತ್ತಿರುವ ಮೊತ್ತ ಎಷ್ಟು ಗೊತ್ತಾ ? ಬರೋಬ್ಬರಿ 8 ಕೋಟಿ ರೂಪಾಯಿ. ಹಾಗಾಗಿ ಕೊಹ್ಲಿ ಗಳಿಕೆ ಎಷ್ಟಿರಬಹುದು ಅನ್ನೋದನ್ನು ನಾವು ಅಂದಾಜಿಸಬಹುದು.

ಕೊಹ್ಲಿಯನ್ನು ಆರಾಧ್ಯ ದೈವವೆಂದು ಮೆಚ್ಚಿಕೊಳ್ಳುವ ಅಭಿಮಾನಿಗಳಿಗೇನೂ ಕೊರತೆಯಿಲ್ಲ. ಸೋಷಿಯಲ್ ಮೀಡಿಯಾದಲ್ಲೂ ಅವರು ಸೂಪರ್ ಹಿಟ್. ಇನ್‌ಸ್ಟಾಗ್ರಾಮ್‌ನಲ್ಲಿ 21 ಕೋಟಿಗೂ ಹೆಚ್ಚು ಫಾಲೋವರ್ಸ್ ಕೊಹ್ಲಿಗಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಆಟಗಾರರಲ್ಲಿ ವಿರಾಟ್ ಕೊಹ್ಲಿ ಕೂಡ ಒಬ್ಬರು. ಕ್ರಿಕೆಟಿಗರ ಪಟ್ಟಿಯಲ್ಲಿ ವಿರಾಟ್‌ ಅಗ್ರಸ್ಥಾನದಲ್ಲಿದ್ದಾರೆ.

ಒಟ್ಟಾರೆ ಕ್ರೀಡಾ ಪಟುಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಕ್ರಿಸ್ಟಿಯಾನೊ ರೊನಾಲ್ಡೊ, ಲಿಯೋನೆಲ್ ಮೆಸ್ಸಿ ಮತ್ತು ನೇಮರ್ ನಂತರದ ಸ್ಥಾನ ಕೊಹ್ಲಿಗೆ ಲಭಿಸಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ 14ನೇ ಸ್ಥಾನದಲ್ಲಿದ್ದಾರೆ. ಪಟ್ಟಿಯಲ್ಲಿ ಟಾಪ್-15 ಹೆಸರುಗಳಲ್ಲಿ ಕಾಣಿಸಿಕೊಂಡ ಏಕೈಕ ಭಾರತೀಯ ಇವರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...