alex Certify BIG NEWS: PFI ಸಂಘಟನೆಯ ಅಧಿಕೃತ ವೆಬ್ ಸೈಟ್ ಬ್ಲಾಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: PFI ಸಂಘಟನೆಯ ಅಧಿಕೃತ ವೆಬ್ ಸೈಟ್ ಬ್ಲಾಕ್

ನವದೆಹಲಿ: ದೇಶಾದ್ಯಂತ ಪಿ ಎಫ್ ಐ ಸಂಘಟನೆ ಹಾಗೂ ಅದರ ಸಹವರ್ತಿ ಸಂಘಟನೆಗಳನ್ನು ನಿಷೇಧ ಮಾಡಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಪಿ ಎಫ್ ಐ ಸಂಘಟನೆ ಅಧಿಕೃತ ವೆಬ್ ಸೈಟ್ ನ್ನು ಬ್ಲಾಕ್ ಮಾಡಿದೆ.

ಅಲ್ಲದೇ ಪಿ ಎಫ್ ಐ ಸಂಘಟನೆಯ ಎಲ್ಲಾ ಸಾಮಾಜಿಕ ಜಾಲತಾಣಗಳಿಗೂ ನಿಷೇಧ ಕುರಿತು ಮಾಹಿತಿ ರವಾನಿಸಿದೆ. ಟ್ವಿಟರ್, ಫೇಸ್ ಬುಕ್, ಇನ್ ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣದ ಕಂಪನಿಗಳಿಗೂ ನಿಷೇಧ ಕುರಿತು ಸರ್ಕಾರ ಮಾಹಿತಿ ರವಾನಿಸಿದೆ.

ಪಿ ಎಫ್ ಐ ಸೇರಿದಂತೆ ಅದರ ಸಹವರ್ತಿ ಸಂಘಟನೆಗಳನ್ನು ಯುಎಪಿಎ ಕಾಯ್ದೆಯಡಿ ಕೇಂದ್ರ ಸರ್ಕಾರ ಮುಂದಿನ 5 ವರ್ಷಗಳ ಕಾಲ ನಿಷೇಧಿಸಿ ಆದೇಶ ಹೊರಡಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...