alex Certify 60 ಸೆಕೆಂಡುಗಳಲ್ಲಿ 4.26 ಔನ್ಸ್ ಕೋಳಿ ಕಾಲು ಮುಕ್ಕಿದ ಯುವತಿಯಿಂದ ʼವಿಶ್ವ ದಾಖಲೆʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

60 ಸೆಕೆಂಡುಗಳಲ್ಲಿ 4.26 ಔನ್ಸ್ ಕೋಳಿ ಕಾಲು ಮುಕ್ಕಿದ ಯುವತಿಯಿಂದ ʼವಿಶ್ವ ದಾಖಲೆʼ

ವಿಶ್ವ ದಾಖಲೆಗಳನ್ನು ಮುರಿಯಲು ಹಲವು ದಾರಿಗಳಿವೆ, ಪ್ರಯತ್ನಗಳಿರುತ್ತದೆ. ಆದರೆ, 4.26 ಔನ್ಸ್ ಕೋಳಿ ಪಾದಗಳನ್ನು ತಿನ್ನುವುದು ಅತ್ಯಂತ ದೊಡ್ಡ ಸಾಹಸವಾಗಿದೆ. ಆಗ್ನೇಯ ಏಷ್ಯಾದ ಚಿಕನ್ ಫೀಟ್ ಖಾದ್ಯ ಈಗ ವಿಶ್ವ ದಾಖಲೆಯಲ್ಲಿ ತನ್ನ ಹೆಸರು ಬರೆದುಕೊಂಡಿದೆ. ಕಾರಣ, ದಕ್ಷಿಣ ಆಫ್ರಿಕಾದ ವುಯೋಲ್ವೆತು ಸಿಮಾನಿಲೆ,

ಡರ್ಬನ್‌‌‌‌ ಉಮ್ಲಾಜಿಯಲ್ಲಿರುವ ಮಾಶಾಂಪ್ಲೇನ್ಸ್ ಲಾಂಜ್ ರೆಸ್ಟೋರೆಂಟ್ ನಲ್ಲಿ ತನ್ನ 4 ಸಹೋದ್ಯೋಗಿಗಳ ವಿರುದ್ಧ ತಿನ್ನುವ ಸ್ಪರ್ಧೆಯಲ್ಲಿ ಈಕೆ ಗೆದ್ದಿದ್ದಾಳೆ. 60 ಸೆಕೆಂಡುಗಳಲ್ಲಿ 4.26 ಔನ್ಸ್ ಕೋಳಿ ಪಾದಗಳನ್ನು ತಿನ್ನುವ ಮೂಲಕ ಹೊಸ ವಿಶ್ವ ದಾಖಲೆ ಸ್ಥಾಪಿಸಿದಳು. ಅದು ಅವಳ ಯಾವುದೇ ಪ್ರತಿಸ್ಪರ್ಧಿಗಳಿಗಿಂತ ಸುಮಾರು ಎರಡು ಪಟ್ಟು ಹೆಚ್ಚು ವೇಗವಾಗಿತ್ತು.

ಟ್ವಿಟರ್ ನಲ್ಲಿ ಬ್ರಾಡ್ವೇ ಸ್ವೀಟ್ಸ್ ಎಸ್ಎ ಈ ಪ್ರಯತ್ನವನ್ನು ಒಳಗೊಂಡ ಕಾರ್ಯಕ್ರಮದ ವಿವರಗಳನ್ನು ಹಂಚಿಕೊಂಡಿದೆ.

ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ತಮ್ಮ ಅಧಿಕೃತ ವೆಬ್ ಸೈಟ್ ನಲ್ಲಿ ಈ ಪ್ರಯತ್ನ ಮಾಡಿದ ಮೊದಲ ವ್ಯಕ್ತಿ ಸಿಮಾನಿಲ್ ಎಂದು ಘೋಷಿಸಿದೆ. ಒಂದು ಸಮಯದಲ್ಲಿ ಒಂದು ಕೋಳಿ ಪಾದಗಳನ್ನು ಮಾತ್ರ ಸೇವಿಸಬಹುದು. ಒಂದಕ್ಕಿಂತ ಹೆಚ್ಚು ತಿನ್ನಲು ಹೋದರೆ ಅನರ್ಹತೆಗೆ ಕಾರಣವಾಗುತ್ತದೆ, ಭಾಗವಹಿಸುವವರು ದಾಖಲೆಗೆ ಯೋಗ್ಯವೆಂದು ಪರಿಗಣಿಸಲು ಕನಿಷ್ಠ 3.8 ಗ್ರಾಂ ಸೇವಿಸಬೇಕಾಗಿತ್ತು.

ಸಿಮಾನಿಲೆ ವಿಶ್ವ ದಾಖಲೆಯನ್ನು ಗೆದ್ದು ಎಲ್ಲರಂತೆ ಸ್ವತಃ ಆಶ್ಚರ್ಯಚಕಿತರಾದರು. ಗಿನ್ನೆಸ್ ವರ್ಲ್ಡ್ ರೆಕಾರ್ಡ್ ವೆಬ್ ಸೈಟ್ ಪ್ರಕಾರ, ನನಗೆ ನಂಬಲು ಆಗುತ್ತಿಲ್ಲ ಎಂದು ಆಕೆ ಪ್ರಮಾಣಪತ್ರವನ್ನು ಸ್ವೀಕರಿಸುವಾಗ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...