ಕೊರೊನಾ ಸಂದರ್ಭದಲ್ಲಿ ಉದ್ಯೋಗಿಗಳಿಗೆ ‘ವರ್ಕ್ ಫ್ರಂ ಹೋಂ’ ನೀಡಲಾಗಿದ್ದು, ಹೀಗಾಗಿ ಯಾವುದೇ ದೈಹಿಕ ಚಟುವಟಿಕೆಗಳು ಇಲ್ಲದ ಕಾರಣ ಎಲ್ಲರ ತೂಕದಲ್ಲೂ ಗಣನೀಯವಾಗಿ ಏರಿಕೆಯಾಗಿತ್ತು. ಇದೀಗ ಕೊರೊನಾ ಇಳಿಕೆಯಾಗಿದ್ದರೂ ಸಹ ಬಹುತೇಕ ಕಂಪನಿಗಳು ಈಗಲೂ ವರ್ಕ್ ಫ್ರಂ ಹೋಂ’ ಮುಂದುವರಿಸಿವೆ.
ಇದರ ಮಧ್ಯೆ ಆನ್ ಲೈನ್ ಬ್ರೋಕರೇಜ್ ಸಂಸ್ಥೆ ಜೆರೋಧಾ ತೂಕ ಇಳಿಸಿಕೊಳ್ಳುವ ತನ್ನ ಉದ್ಯೋಗಿಗಳಿಗೆ ಭರ್ಜರಿ ಬಂಪರ್ ಗಿಫ್ಟ್ ನೀಡಲು ಮುಂದಾಗಿದೆ. ನೌಕರರು ಆರೋಗ್ಯವಾಗಿರಬೇಕು ಎಂಬ ಆಶಯದಿಂದ ಸಂಸ್ಥೆ ಈ ತೀರ್ಮಾನ ಕೈಗೊಂಡಿದ್ದು, ತೂಕ ಇಳಿಸಿಕೊಂಡ ಒಬ್ಬ ಅದೃಷ್ಟವಂತ ಉದ್ಯೋಗಿಗೆ 10 ಲಕ್ಷ ರೂಪಾಯಿ ಸಿಗಲಿದೆ.
ಉದ್ಯೋಗಿಗಳಿಗೆ ಫಿಟ್ನೆಸ್ ಚಾಲೆಂಜ್ ನೀಡಲಾಗಿದ್ದು, ದಿನವೊಂದಕ್ಕೆ 350 ಕ್ಯಾಲರಿ ಬರ್ನ್ ಮಾಡುವ ಉದ್ಯೋಗಿಗಳಿಗೆ ವಿವಿಧ ರೀತಿಯ ಪ್ರೋತ್ಸಾಹ ನೀಡಲಾಗುತ್ತದೆ. ಅಲ್ಲದೆ ನಿಗದಿತ ಕಾಲಮಿತಿಯೊಳಗೆ ತೂಕ ಇಳಿಸಿಕೊಂಡ ಉದ್ಯೋಗಿಗೆ ಒಂದು ತಿಂಗಳ ವೇತನ ಬೋನಸ್ ಆಗಿ ಸಿಗಲಿದೆ. ಬಳಿಕ ತೂಕ ಇಳಿಸಿಕೊಂಡ ಉದ್ಯೋಗಿಗಳ ಲಕ್ಕಿ ಡ್ರಾ ನಡೆಸಲಾಗುತ್ತಿದ್ದು, ಇದರಲ್ಲಿ ವಿಜೇತರಾದ ಅದೃಷ್ಟವಂತ ಉದ್ಯೋಗಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡಲಾಗುತ್ತದೆ.