ನವದೆಹಲಿ: ವಿದ್ಯುತ್ ಚಾಲಿತ ವಾಹನಗಳ ಬ್ಯಾಟರಿ ಸುರಕ್ಷತೆ ಅವಧಿಯನ್ನು ಕೇಂದ್ರ ಸಾರಿಗೆ ಸಚಿವಾಲಯ ವಿಸ್ತರಿಸಿದೆ.
ಸುರಕ್ಷಿತ ಬ್ಯಾಟರಿ ಮಾನದಂಡಗಳಿಗಾಗಿ ಇ-ವಾಹನ ತಯಾರಕರು ಹೆಚ್ಚಿನ ಸಮಯ ಕೋರಿದ್ದರು. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಎಲೆಕ್ಟ್ರಿಕ್ ವಾಹನ ತಯಾರಕರ ಬೇಡಿಕೆಯಂತೆ ಅವಧಿ ವಿಸ್ತರಿಸಿದೆ.
ವಿದ್ಯುತ್ ಚಾಲಿತ ವಾಹನಗಳಿಗೆ ಅಳವಡಿಸಿಸಲಾಗುವ ಬ್ಯಾಟರಿಯನ್ನು ಹೆಚ್ಚು ಸುರಕ್ಷಿತವಾಗಿಸಲು ವಾಹನ ತಯಾರಿಕಾ ಸಂಸ್ಥೆಗಳಿಗೆ ಕಠಿಣ ಮಾನದಂಡ ಅಳವಡಿಸಿಕೊಳ್ಳಲು ಹೆಚ್ಚಿನ ಸಮಯಾವಕಾಶ ನೀಡಲಾಗಿದೆ.
ಡಿಸೆಂಬರ್ 1 ರೊಳಗೆ ಮೊದಲ ಹಂತದ ಸುರಕ್ಷತೆಯ ಮಾನದಂಡಗಳನ್ನು ಅಳವಡಿಸಿಕೊಳ್ಳಬೇಕು. 2023ರ ಮಾರ್ಚ್ 31 ರೊಳಗೆ ಎರಡನೇ ಹಂತದ ಸುರಕ್ಷತಾ ಮಾನದಂಡಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.
ಈ ಮೊದಲು 2022ರ ಅಕ್ಟೋಬರ್ 1 ರೊಳಗೆ ವಿದ್ಯುತ್ ಚಾಲಿತ ವಾಹನಗಳಿಗೆ ಅಳವಡಿಕೆ ಮಾಡುವ ಬ್ಯಾಟರಿಯನ್ನು ಹೆಚ್ಚು ಸುರಕ್ಷಿತವಾಗಿಸಲು ವಾಹನಗಳ ತಯಾರಿಕಾ ಸಂಸ್ಥೆಗಳು ಕಠಿಣ ಮಾನದಂಡ ಅಳವಡಿಸಿಕೊಳ್ಳಬೇಕು ಎಂದು ಕೇಂದ್ರ ಸಾರಿಗೆ ಸಚಿವಾಲಯ ಸೂಚಿಸಿತ್ತು.