alex Certify ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ದೇಶದ ಜನತೆಗೆ ಡಿಸೆಂಬರ್ ವರೆಗೆ ಉಚಿತ ಆಹಾರ ಧಾನ್ಯ ವಿತರಣೆ ಸಾಧ್ಯತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ದೇಶದ ಜನತೆಗೆ ಡಿಸೆಂಬರ್ ವರೆಗೆ ಉಚಿತ ಆಹಾರ ಧಾನ್ಯ ವಿತರಣೆ ಸಾಧ್ಯತೆ

ನವದೆಹಲಿ: ಉಚಿತ ಆಹಾರ ಧಾನ್ಯಗಳ ವಿತರಣೆ ಕಾರ್ಯಕ್ರಮವನ್ನು ಮೂರು ತಿಂಗಳವರೆಗೆ ವಿಸ್ತರಿಸುವ ಸಾಧ್ಯತೆ ಇದೆ. ಆಹಾರ ಸಚಿವಾಲಯವು ಉಚಿತ ಪಡಿತರ ವಿತರಣೆ ವಿಸ್ತರಣೆ ಮಾಡುವಂತೆ ಕೋರಿರುವುದರಿಂದ ಕೇಂದ್ರ ಸರ್ಕಾರ ಡಿಸೆಂಬರ್‌ ವರೆಗೆ ಸುಮಾರು 800 ಮಿಲಿಯನ್ ಜನರಿಗೆ ಉಚಿತ ಅಕ್ಕಿ ಅಥವಾ ಗೋಧಿಯನ್ನು ನೀಡುವುದನ್ನು ಮುಂದುವರಿಸಬಹುದು.

ಸೆಪ್ಟೆಂಬರ್ ಅಂತ್ಯಕ್ಕೆ ಉಚಿತವಾಗಿ ಆಹಾರಧಾನ್ಯ ವಿತರಣೆ ಕಾರ್ಯ ಮುಕ್ತಾಯಗೊಳಿಸಲು ತೀರ್ಮಾನಿಸಲಾಗಿತ್ತು.

ರಾಷ್ಟ್ರದ ಹಣಕಾಸು ಸಚಿವಾಲಯದ ಆಕ್ಷೇಪಣೆ ಹೊರತಾಗಿಯೂ ಉಚಿತ ಆಹಾರ ಧಾನ್ಯ ವಿತರಣೆ ವಿಸ್ತರಿಸಲು ಆಹಾರ ಸಚಿವಾಲಯದಿಂದ ಒತ್ತಡ ಹೇರಲಾಗಿದೆ.

ಕಾರ್ಯಕ್ರಮ ವಿಸ್ತರಿಸುವ ಪರವಾಗಿಲ್ಲದ ಹಣಕಾಸು ಸಚಿವಾಲಯ ಹಣಕಾಸಿನ ಒತ್ತಡ ಮತ್ತು ಜಾಗತಿಕವಾಗಿ ಬಿಗಿಯಾದ ಪೂರೈಕೆಗಳಿಂದಾಗಿ ನೀಡಲಾಗುವ ಧಾನ್ಯಗಳ ಪ್ರಮಾಣ ಕಡಿಮೆ ಮಾಡಲು ಸೂಚಿಸಿದೆ.

ಕಠಿಣ ಕೋವಿಡ್ -19 ಲಾಕ್‌ ಡೌನ್ ಸಮಯದಲ್ಲಿ ಬಡವರಿಗೆ ಆಹಾರ ನೀಡಲು ಸಹಾಯ ಮಾಡಲು ಏಪ್ರಿಲ್ 2020 ರಿಂದ ಪ್ರಾರಂಭವಾದ ಕಾರ್ಯಕ್ರಮದ ಅನ್ವಯ ಪ್ರತಿ ತಿಂಗಳು ಒಬ್ಬ ವ್ಯಕ್ತಿಗೆ 5 ಕೆಜಿಗಳಷ್ಟು ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತದೆ. ಇದಕ್ಕಾಗಿ ಸುಮಾರು $44 ಶತಕೋಟಿಗೆ ಏರಿದೆ, ಇದು ಸರ್ಕಾರದ ಹಣಕಾಸಿನ ಮೇಲೆ ಒತ್ತಡವನ್ನುಂಟು ಮಾಡಿದೆ.

ಅಕ್ಟೋಬರ್‌ನಿಂದ ಪ್ರಾರಂಭವಾಗುವ ಭಾರತದ ಹಬ್ಬದ ಋತುವಿನಲ್ಲಿ ಈ ಪ್ರಸ್ತಾಪವು ಆರ್ಥಿಕ ಚಟುವಟಿಕೆಯನ್ನು ಚಾಲನೆ ಮಾಡಲು ಪ್ರಮುಖ ಕ್ರಮವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್, ಹಿಮಾಚಲ ಪ್ರದೇಶದ ಚುನಾವಣೆ ನಡೆಯಲಿರುವುದರಿಂದ ಉಚಿತ ಆಹಾರಧಾನ್ಯ ವಿಸ್ತರಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...