ಬೀದರ್: ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಮುರಾಳ ಗ್ರಾಮದಲ್ಲಿ ನಾಲ್ಕು ಕೋತಿಗಳಿಗೆ ಮತ್ತು ಬರುವ ಔಷದ ನೀಡಿ ಹತ್ಯೆ ಮಾಡಲಾಗಿದೆ.
ಮುರಾಳ ಸಮೀಪ ಹುಣಸೆಮರಕ್ಕೆ ನೇಣು ಹಾಕಿ ಕೋತಿಗಳನ್ನು ಹತ್ಯೆ ಮಾಡಲಾಗಿದೆ. ಮರಕ್ಕೆ ನೇಣು ಬಿಗಿದು ಹಂತಕರು ಕೋತಿಗಳನ್ನು ಹತ್ಯೆ ಮಾಡಿದ್ದು, ಘಟನೆ ಸ್ಥಳಕ್ಕೆ ನಿಟ್ಟೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೋತಿಗಳ ಸಾಮೂಹಿಕ ಹತ್ಯೆಗೆ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಮತ್ತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪಿಗಳನ್ನು ಬಂಧಿಸುವಂತೆ ನಿಟ್ಟೂರು ಠಾಣೆಗೆ ದೂರು ನೀಡಲಾಗಿದೆ. ಪೊಲೀಸರು ಪರಿಶೀಲನೆ ನಡೆಸಿ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.