ವಿಮಾನ ಲ್ಯಾಂಡಿಂಗ್ಗೆ ಸಂಬಂಧಿಸಿದ ಅಹಿತಕರ ಘಟನೆಯಿಂದಾಗಿ ಫ್ರಾನ್ಸ್ನ ದಕ್ಷಿಣ ಮೆಡಿಟರೇನಿಯನ್ ಕರಾವಳಿಯಲ್ಲಿರುವ ವಿಮಾನ ನಿಲ್ದಾಣವನ್ನು ಅನಿದಿರ್ಷ್ಟ ಸಮಯದವರೆಗೆ ಮುಚ್ಚಲು ಕಾರಣವಾಗಿದೆ.
ವಿಮಾನ ಹಾರಾಟವನ್ನು ಸಾಮಾನ್ಯವಾಗಿ ಸುರಕ್ಷಿತ ಸಾರಿಗೆ ವಿಧಾನವೆಂದು ಪರಿಗಣಿಸಲಾಗುತ್ತದೆ ಆದರೆ ಇದು ಕೆಲಮೊಮ್ಮೆ ಅವಘಡಗಳನ್ನು ಎದುರಿಸುತ್ತದೆ. ಅದು ಪ್ರಯಾಣಿಕರಿಗೆ ಜೀವಹಾನಿ ಅಥವಾ ಸಾವಿನ ಸಮೀಪವಿರುವ ಅನುಭವಗಳಿಗೆ ಕಾರಣವಾಗಬಹುದು. ಇದು ಕಠಿಣ ಕ್ರಮಕ್ಕೂ ಕಾರಣವಾಗಿಬಿಡುತ್ತದೆ.
ವಿಮಾನವು ಅದೃಷ್ಟವಶಾತ್ ವಾಣಿಜ್ಯ ವಿಮಾನವಲ್ಲ, ಅದರಲ್ಲಿ ಪ್ರಯಾಣಿಕರಿರಲಿಲ್ಲ. ವರದಿಗಳ ಪ್ರಕಾರ, ಬೋಯಿಂಗ್ 737 ಶನಿವಾರ ಬೆಳಿಗ್ಗೆ ಪ್ಯಾರಿಸ್ ಚಾರ್ಲ್ಸ್ ಡಿ ಗೌಲ್ ವಿಮಾನ ನಿಲ್ದಾಣದಿಂದ ಮಾಂಟ್ಪೆಲ್ಲಿಯರ್ಗೆ ಹೊರಟಿತು. ಆದಾಗ್ಯೂ, ಮಾಂಟ್ಪೆಲ್ಲಿಯರ್ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ, ಪೆೈಲಟ್ ರನ್ವೇಯನ್ನು ಓವರ್ಶಾಟ್ ಮಾಡಿದರು, ಇದರಿಂದಾಗಿ ಅದು ರನ್ವೇ ಪಕ್ಕದಲ್ಲಿರುವ ಸಮುದ್ರಕ್ಕೆ ಇಳಿಯಿತು.
ವಿಮಾನದ ಎಂಜಿನ್ ನೀರಿನಲ್ಲಿ ಮುಳುಗಿ ಹಾನಿಗೆ ಕಾರಣವಾಯಿತು. ಅದೃಷ್ಟವಶಾತ್ ಅದರಲ್ಲಿದ್ದ ಮೂವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬ್ಯೂರೋ ಡಿ’ಎನ್ಕ್ವೆಟ್ಸ್ ಎಟ್ ಡಿ ಅನಾಲಿಸಸ್ ಹಂಚಿಕೊಂಡ ಫೋಟೋಗಳು ರನ್ವೇಯ ದಕ್ಷಿಣ ತುದಿಯಲ್ಲಿರುವ ಮುಳುಗಿರುವ ವಿಮಾನವನ್ನು ಕಾಣಬಹುದು.
ಘಟನೆಯ ಕುರಿತು ದಕ್ಷಿಣ ಫ್ರಾನ್ಸ್ನ ಹೆರಾಲ್ಟ್ ಇಲಾಖೆ ಹೇಳಿಕೆ ನೀಡಿದ್ದು, ಈ ಅಪಘಾತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ ಮತ್ತು ವಿಮಾನದಲ್ಲಿದ್ದ ಮೂವರು ಸುರಕ್ಷಿತವಾಗಿದ್ದಾರೆ ಎಂದು ಹೇಳಿದ್ದಾರೆ.
ಈ ಘಟನೆಯ ಬಳಿಕ ಶನಿವಾರ 11 ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಭಾನುವಾರದಂದು, ಮಾಂಟ್ಪೆಲ್ಲಿಯರ್ ವಿಮಾನ ನಿಲ್ದಾಣವು ಹನ್ನೆರಡು ಬೆಳಗಿನ ಸೇವೆಗಳನ್ನು ರದ್ದುಗೊಳಿಸಿತು.