ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಕಾಣಿಸಿಕೊಂಡ ಬೆನ್ನೆಲುಬು ತಣ್ಣಗಾಗುವ ವಿಡಿಯೊದಲ್ಲಿ, ವಿದ್ಯಾರ್ಥಿಯ ಬ್ಯಾಗ್ನಲ್ಲಿ ನಾಗರಹಾವು ಇರುವುದನ್ನು ಕಂಡು ಶಿಕ್ಷಕರು ಗಾಬರಿಗೊಂಡು, ಆತನನ್ನು ರಕ್ಷಿಸಿದ್ದಾರೆ.
ವೀಡಿಯೊದಲ್ಲಿ ಶಿಕ್ಷಕರೊಬ್ಬರು ವಿದ್ಯಾರ್ಥಿಯ ಬ್ಯಾಗ್ನಿಂದ ನಾಗರಹಾವನ್ನು ಹೊರತೆಗೆಯಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಉಮಾರಜಾಕ್ ಎಂಬ ವಿದ್ಯಾರ್ಥಿಯ ಬ್ಯಾಗ್ ನಲ್ಲಿ ಪುಸ್ತಕಗಳ ನಡುವೆ ಸುರುಟಿಕೊಂಡಿದ್ದ ಹಾವು ಪತ್ತೆಯಾಗಿದೆ.
ಮಧ್ಯಪ್ರದೇಶದ ದಾತಿಯಾದ ಬದೌನಿಯ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿ ಶಾಲೆ ಬ್ಯಾಗ್ನಲ್ಲಿ ನಾಗರಹಾವು ಯಾವಾಗ ಪ್ರವೇಶಿಸಿತು, ಹೇಗೆ ಪ್ರವೇಶಿಸಿತು ಎಂದು ತಿಳಿದು ಬಂದಿಲ್ಲ.
ಉಮಾ ರಜಾಕ್ ವಾಸ್ತವವಾಗಿ ತರಗತಿಯಲ್ಲಿ ತನ್ನ ಪುಸ್ತಕಗಳನ್ನು ತೆಗೆದುಕೊಳ್ಳುತ್ತಿದ್ದು, ಬ್ಯಾಗ್ ಒಳಗೆ ಏನೋ ಚಲಿಸುತ್ತಿದ್ದುದರ ಅನುಭವವಾಗಿದೆ. ಅದನ್ನು ಶಿಕ್ಷಕರ ಗಮನಕ್ಕೆ ತಂದಿದ್ದು, ಶಿಕ್ಷಕರನ್ನು ಇದನ್ನು ಗಮನಿಸಿ ಮೋಟಾರು ಬೈಕಿನಲ್ಲಿ ಬ್ಯಾಗ್ ಅನ್ನು ದೂರದ ಸ್ಥಳಕ್ಕೆ ತೆಗೆದುಕೊಂಡು ಹೋದರು. ಬಳಿಕ ಬ್ಯಾಗನ್ನು ಕೊಡವಿ ಹಾವನ್ನು ಹೊರಹಾಕಲಾಯಿತು. ಹಾವು ಆತಂಕದಲ್ಲಿ ಹೆಡೆ ಬಿಚ್ಚಿ ಪ್ರತಿರಕ್ಷಣೆಗೂ ಮುಂದಾಗಿತ್ತು. ಶಿಕ್ಷಕರ ಸಕಾಲಿಕ ಶೀಘ್ರ ಸ್ಪಂದನೆಯಿಂದಾಗಿ ಉಮಾ ರಜಾಕ್ ಪ್ರಾಣ ರಕ್ಷಣೆಯಾಗಿದೆ.