ದೆಹಲಿಯ ಮೆಹ್ರೌಲಿಯಲ್ಲಿ ಗಗನಸಖಿಯೊಬ್ಬಳ ಮೇಲೆ ಪರಿಚಿತನೇ ಅತ್ಯಾಚಾರ ಎಸಗಿದ್ದಾನೆ. ಸಂತ್ರಸ್ಥ ಮಹಿಳೆ ಘಟನೆ ಬಳಿಕ ಆತನನ್ನು ಮನೆಯಲ್ಲಿ ಕೂಡಿ ಹಾಕಿ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಕಾಮುಕ ಹರ್ಜೀತ್ ಯಾದವ್, ಕಾನ್ಪುರ ನಿವಾಸಿ. ರಾಜಕೀಯ ಪಕ್ಷವೊಂದರ ಬ್ಲಾಕ್ ಅಧ್ಯಕ್ಷನಾಗಿದ್ದಾನೆ.
ಸುಮಾರು ಒಂದೂವರೆ ತಿಂಗಳ ಹಿಂದೆ ಗಗನಸಖಿಗೆ ಆತನ ಪರಿಚಯವಾಗಿತ್ತು. ಹರ್ಜೀತ್ ಯಾದವ್ ಕಂಠಪೂರ್ತಿ ಕುಡಿದು ಆಕೆಯ ಮನೆಗೆ ಬಂದಿದ್ದಾನೆ. 30 ವರ್ಷದ ಗಗನಸಖಿ ಮೇಲೆ ಬಲಾತ್ಕಾರವೆಸಗಿದ್ದಾನೆ.
ಆಕೆ ಹರ್ಜೀತ್ನನ್ನು ಕೋಣೆಯಲ್ಲಿ ಕೂಡಿ ಹಾಕಿ ಬೀಗ ಜಡಿದಳು. ನಂತರ ಪೊಲೀಸರಿಗೆ ಕರೆ ಮಾಡಿದ್ದಾಳೆ. ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆತನ ವಿರುದ್ಧ ಪ್ರಕರಣವನ್ನೂ ದಾಖಲಿಸಿಕೊಂಡಿದ್ದಾರೆ. ಕಾಮುಕನನ್ನು ಹಿಡಿದುಕೊಟ್ಟ ಸಂತ್ರಸ್ಥೆಯ ಧೈರ್ಯವನ್ನು ಪೊಲೀಸರು ಮೆಚ್ಚಿಕೊಂಡಿದ್ದಾರೆ.