alex Certify ಬೆಂಗಳೂರಿನಲ್ಲಿ ದಸರಾ ವೈಭವ: ವಿದ್ಯಾಮಾನ್ಯ ವಿದ್ಯಾಕೇಂದ್ರದಲ್ಲಿ ದಸರಾ ಬೊಂಬೆ ಪ್ರದರ್ಶನ, ಅನಾವರಣಗೊಂಡ ಸಂಪೂರ್ಣ ರಾಮಾಯಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರಿನಲ್ಲಿ ದಸರಾ ವೈಭವ: ವಿದ್ಯಾಮಾನ್ಯ ವಿದ್ಯಾಕೇಂದ್ರದಲ್ಲಿ ದಸರಾ ಬೊಂಬೆ ಪ್ರದರ್ಶನ, ಅನಾವರಣಗೊಂಡ ಸಂಪೂರ್ಣ ರಾಮಾಯಣ

ಬೆಂಗಳೂರು: ಬೆಂಗಳೂರಿನ ವಿದ್ಯಾಮಾನ್ಯ ನಗರದ ಶ್ರೀ ವಿದ್ಯಾಮಾನ್ಯ ವಿದ್ಯಾಕೇಂದ್ರದಲ್ಲಿ ದಸರಾ ಹಬ್ಬದ ಸೌಂದರ್ಯ ಕಳೆಕಟ್ಟಿದೆ. ಶ್ರೀ ವಿದ್ಯಾಮಾನ್ಯ ವಿದ್ಯಾ ಕೇಂದ್ರದಲ್ಲಿ ಭಾರತೀಯ ಸಂಸ್ಕೃತಿ ಆಚರಣೆ ಹಾಗೂ ಮೌಲ್ಯಗಳು ಅನಾವರಣಗೊಂಡಿದೆ.

ಆಡಳಿತ ಮಂಡಳಿ ಸಹಯೋಗದೊಂದಿಗೆ ಬೋಧಕ ಸಿಬ್ಬಂದಿ ವತಿಯಿಂದ ಶ್ರೀ ರಾಮಾಯಣ ವೈಭವ, ಪಟ್ಟದ ಗೊಂಬೆ, ಶ್ರೀಕೃಷ್ಣ ಲೀಲಾ, ಪುರಿ ಪರಮಪುರುಷ ಜಗನ್ನಾಥ ವೈಭವ, ಭಾರತೀಯ ಬುಡಕಟ್ಟು ಹಾಗೂ ಹಳ್ಳಿಗಳ ಕುರಿತಾದ ಪ್ರದರ್ಶನ ಮತ್ತು ಮೈಸೂರು ದಸರಾ ಮೆರವಣಿಗೆ ಮೊದಲಾದವುಗಳನ್ನು ಗೊಂಬೆಗಳ ಪ್ರದರ್ಶನದ ಮೂಲಕ ಅನಾವರಣಗೊಳಿಸಲಾಗಿದೆ.

ಸಂಪೂರ್ಣ ರಾಮಾಯಣದ(ರಾಮನ ಹುಟ್ಟು, ವನವಾಸ, ಶ್ರೀರಾಮನ ಪಟ್ಟಾಭಿಷೇಕ, ಲವಕುಶ ಜನನ, ಲವಕುಶ ಪಟ್ಟಾಭೀಷೇಕ) ಗೊಂಬೆಗಳು, ಮೈಸೂರ ದಸರಾ ಜಂಬೂ ಸವಾರಿ ಗೊಂಬೆಗಳು, ಶ್ರೀ ಕೃಷ್ಣ ಲೀಲಾ, ನವದುರ್ಗೆಯರು, ಮದುವೆ ಮಂಟಪ, ಚೆನ್ನಪಟ್ಟಣದ ಬೊಂಬೆಗಳು, ಪಟ್ಟದ ಬೊಂಬೆಗಳು, ತೋಪುಗಳು, ಕಾಮದೇನು, ಹಳ್ಳಿಗಾಡು ಸೇರಿದಂತೆ ಅನೇಕ ಪ್ರಕಾರದ ಬೊಂಬೆಗಳನ್ನು ಅಚ್ಚುಕಟ್ಟಾಗಿ ಜೋಡಿಸಿರುವುದು ನೋಡುಗರನ್ನು ಆಕರ್ಷಿಸುತ್ತಿವೆ.

ಕಳೆದ 7 ವರ್ಷಗಳಿಂದ ಶಿಕ್ಷಣ ಸಂಸ್ಥೆಯಲ್ಲಿ ದಸರಾ ಆಚರಣೆ ಮಾಡಿಕೊಂಡು ಬರಲಾಗಿದೆ. ಆಡಳಿತ ಮಂಡಳಿಯ ಮುಖ್ಯಸ್ಥರಾದ ಸೌಂದರ್ಯ ರಮೇಶ್ ಮತ್ತು ಸೌಂದರ್ಯ ಭರತ್ ಅವರು ಸಂಪೂರ್ಣ ಸಹಕಾರ ನೀಡಿದ್ದಾರೆ.

ಈ ಬಾರಿ ಸಂಪೂರ್ಣ ರಾಮಾಯಣ, ಕೃಷ್ಣ ಲೀಲೆ, ಮಹಾಭಾರತದ ಸನ್ನಿವೇಶಗಳು, ಪುರಿ ಜಗನ್ನಾಥ ರಥಯಾತ್ರೆ, ಮೈಸೂರು ದಸರಾ ಪ್ರದರ್ಶನವಿದ್ದು, ಸೆ. 26 ರಿಂದ ಅ. 5 ರವರೆಗೂ ಬೆಳಗ್ಗೆ 9.30 ರಿಂದ ಸಂಜೆ 6.30 ರವರೆಗೂ ಬೊಂಬೆ ಪ್ರದರ್ಶನ ಇರಲಿದೆ ಎಂದು ಶ್ರೀ ವಿದ್ಯಾಮಾನ್ಯ ವಿದ್ಯಾ ಕೇಂದ್ರದ ಪ್ರಾಂಶುಪಾಲೆ ಶಾರದಾ ಅವರು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...