ನವರಾತ್ರಿಯ ಈ ಶುಭ ಸಂದರ್ಭದಲ್ಲಿ ತಾಯಿ ದುರ್ಗೆ ಆಶೀರ್ವಾದ ಪಡೆಯಲು ಎಲ್ಲರೂ ಬಯಸ್ತಾರೆ. ದುರ್ಗೆ ಕೃಪೆಯಿಂದ ಮನೆಯಲ್ಲಿ ಸದಾ ಸಂತೋಷ, ಶಾಂತಿ ನೆಲೆಸಿರಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಾರೆ. ಹಿಂದೂ ಧರ್ಮದಲ್ಲಿ ಆದಿಶಕ್ತಿಯ ಆರಾಧನೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ನವರಾತ್ರಿಯ ಒಂಬತ್ತು ದಿನ ತಾಯಿ ದುರ್ಗೆ ಪೂಜೆ ಮಾಡುವಾಗ ಕೆಲ ವಿಷ್ಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
ನಿಮ್ಮ ರಾಶಿಗೆ ಅನುಗುಣವಾಗಿ ದುರ್ಗೆಯ ವಿವಿಧ ರೂಪಗಳ ವಿಗ್ರಹವನ್ನು ಮನೆಯಲ್ಲಿ ಇಡಬೇಕು. ತುಲಾ ಮತ್ತು ವೃಷಭ ರಾಶಿಯವರು ಕಾತ್ಯಾಯನಿ ದೇವಿಯನ್ನೂ, ಮಿಥುನ ಮತ್ತು ಕನ್ಯಾ ರಾಶಿಯವರು ಮಹಾಗೌರಿಯ ವಿಗ್ರಹವನ್ನೂ, ವೃಶ್ಚಿಕ ಮತ್ತು ಮೇಷ ರಾಶಿಯವರು ಮನೆಯಲ್ಲಿ ಸ್ಕಂದಮಾತೆಯನ್ನು ಮನೆಯಲ್ಲಿ ಇಡಬೇಕು., ಧನು ಮತ್ತು ಮೀನ ಮತ್ತು ಕೂಷ್ಮಾಂಡ ಮತ್ತು ಮಕರ ರಾಶಿಯವರು ಬ್ರಹ್ಮಚಾರಿಣಿ ದೇವಿಯ ವಿಗ್ರಹ ಇಡಬೇಕು. ಕರ್ಕ ರಾಶಿಯವರು ಚಂದ್ರಘಂಟಾ, ಸಿಂಹ ರಾಶಿಯವರು ಶೈಲಪುತ್ರಿ ವಿಗ್ರಹವನ್ನು ಮನೆಯಲ್ಲಿ ಇಟ್ಟು ಪೂಜೆ ಮಾಡಬೇಕು.
ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಹೆಚ್ಚಿನ ಮಹತ್ವವಿದೆ. ನವರಾತ್ರಿ ಸಂದರ್ಭದಲ್ಲಿ ತುಳಸಿ ಗಿಡವನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ನೆಡಬೇಕು. ಇದ್ರಿಂದ ಶುಭ ಫಲ ಪ್ರಾಪ್ತಿಯಾಗುತ್ತದೆ.
ನವರಾತ್ರಿ ವ್ರತ ಮಾಡುವವರು ಅಖಂಡ ಜ್ಯೋತಿಯನ್ನು ಬೆಳಗಿಸಬೇಕು. ದೀಪ ಎಂದೂ ಆರದಂತೆ ನೋಡಿಕೊಳ್ಳಬೇಕು. ಸತತ ಒಂಭತ್ತು ದಿನಗಳ ಕಾಲ ದೀಪವನ್ನು ಬೆಳಗಿಸಬೇಕು. ನಿರಂತರವಾಗಿ ದೀಪ ಉರಿಯುತ್ತಿದ್ದರೆ ಮನೆಯಲ್ಲಿ ಶಾಂತಿ, ಸಂತೋಷ, ಸಮೃದ್ಧಿ ನೆಲೆಸಿರುತ್ತದೆ.
ನವರಾತ್ರಿ ಸಂದರ್ಭದಲ್ಲಿ ಕನ್ಯೆಯ ಪೂಜೆ ಮಾಡಬೇಕು. 9 ಚಿಕ್ಕ ಕನ್ಯೆಯರನ್ನು ಮನೆಗೆ ಕರೆದು, ಅವರ ಪೂಜೆ ಮಾಡಿ, ಆಶೀರ್ವಾದ ಪಡೆಯಬೇಕು ಎಂದು ಹೇಳಲಾಗುತ್ತದೆ. ಇದ್ರಿಂದ ದೇವಿ ಕೃಪೆ ನಿಮ್ಮ ಮೇಲೆ ಬೀಳುತ್ತದೆ.