ಕಾರು ಖರೀದಿ ಮಾಡಬೇಕು ಅನ್ನೋದು ಬಹುತೇಕ ಎಲ್ಲರ ಆಸೆ. ಆದ್ರೆ ಇದೊಂದು ದೊಡ್ಡ ನಿರ್ಧಾರ. ಕಾರು ಕೊಂಡುಕೊಳ್ಳಲು ಕನಿಷ್ಠ 4 ರಿಂದ 5 ಲಕ್ಷ ರೂಪಾಯಿ ಬೇಕು. ಹೊಸ ಕಾರು ಇದಕ್ಕಿಂತ ಕಡಿಮೆ ಬೆಲೆಗೆ ಸಿಗುವುದು ಕಷ್ಟ.
ಕಾರು ಖರೀದಿ ಮಾಡುವ ಸಂದರ್ಭದಲ್ಲಿ ಗ್ರಾಹಕರ ಮನಸ್ಸಿನಲ್ಲಿ ಹತ್ತಾರು ಪ್ರಶ್ನೆಗಳಿರುತ್ತವೆ. ಅವುಗಳಲ್ಲಿ ಮುಖ್ಯವಾದದ್ದೆಂದರೆ ಕಾರು ಖರೀದಿಗೆ ಇದು ಸೂಕ್ತ ಸಮಯ ಹೌದೋ ಅಲ್ಲವೇ ಎಂಬುದು. ಈ ಸಮಯದಲ್ಲಿ ಕಾರು ಖರೀದಿಸುವ ಬಜೆಟ್ ನಿಮ್ಮಲ್ಲಿದ್ದರೆ, ಕಾರು ಕೊಳ್ಳುವ ಆಲೋಚನೆಯಿದ್ದರೆ ಗೊಂದಲಗಳನ್ನು ಮೊದಲು ಬಗೆಹರಿಸಿಕೊಳ್ಳಿರಿ.
ಮೊದಲು ನಿಮಗೆ ಕಾರು ಅಗತ್ಯವಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಬಜೆಟ್ ಎಷ್ಟು ಎಂಬುದನ್ನು ಖಚಿತಪಡಿಸಿಕೊಂಡಮೇಲೆ ಬುಕ್ಕಿಂಗ್ ಮಾಡಿ. ಕಾರು ಈಗಲೇ ಬೇಡ ಎಂಬ ಆಲೋಚನೆ ಬಂದರೆ ಬುಕ್ಕಿಂಗ್ ಮಾಡಿದ ಮೇಲೆ ಕೂಡ ಅದನ್ನು ಕ್ಯಾನ್ಸಲ್ ಮಾಡಬಹುದು. ಈ ದಿನಗಳಲ್ಲಿ ಬುಕ್ಕಿಂಗ್ ಮಾಡಿದ ತಕ್ಷಣ ಕಾರು ಸಿಗುವುದಿಲ್ಲ. ತಿಂಗಳುಗಟ್ಟಲೆ ನೀವು ಕಾಯಬೇಕಾಗುತ್ತದೆ.
ಕೆಲವು ಕಾರುಗಳಂತೂ ಬುಕ್ಕಿಂಗ್ ಮಾಡಿ 2 ವರ್ಷಗಳ ನಂತರ ಸಿಗುತ್ತವೆ. ಆದ್ದರಿಂದ ದೀರ್ಘ ಕಾಯುವಿಕೆ ನಿಮಗೆ ಸೂಕ್ತ ಎನಿಸಿದರೆ ಬುಕ್ಕಿಂಗ್ ಮಾಡಬಹುದು. ಹಬ್ಬದ ಸಮಯದಲ್ಲಿ ಅನೇಕ ಕಂಪನಿಗಳು ತಮ್ಮ ಕಾರುಗಳ ಮೇಲೆ ಉತ್ತಮ ಕೊಡುಗೆಗಳನ್ನು ನೀಡುತ್ತವೆ. ವರ್ಷದ ಉಳಿದ ಸಮಯಕ್ಕೆ ಹೋಲಿಸಿದ್ರೆ ಈ ದಿನಗಳಲ್ಲಿ ಉತ್ತಮ ರಿಯಾಯಿತಿ ಲಭ್ಯವಿರುತ್ತದೆ. ಇದರಿಂದಾಗಿ ಸ್ವಲ್ಪ ಹಣವೂ ಉಳಿತಾಯವಾಗುತ್ತದೆ. ಹಾಗಾಗಿ ಕಾರ್ ಬುಕ್ಕಿಂಗ್ ಮಾಡಲು ಇದು ಸೂಕ್ತ ಸಮಯ.
ಸೆಪ್ಟೆಂಬರ್ ತಿಂಗಳಿನಲ್ಲಿ ಮಾರುತಿ ತನ್ನ ಕಾರುಗಳ ಮೇಲೆ 55,000 ರೂಪಾಯಿ, ಟಾಟಾ ಮೋಟಾರ್ಸ್ 40,000 ರೂಪಾಯಿ, ಹೋಂಡಾ 27 ಸಾವಿರ ರೂಪಾಯಿ ಮತ್ತು ಹುಂಡೈ ಕಂಪನಿ 50 ಸಾವಿರದವರೆಗೆ ರಿಯಾಯಿತಿ ಆಫರ್ಗಳನ್ನು ನೀಡುತ್ತಿದೆ. ಇವುಗಳು ನಗದು ರಿಯಾಯಿತಿ ಮತ್ತು ವಿನಿಮಯ ಬೋನಸ್ನಂತಹ ವಿವಿಧ ಪ್ರಯೋಜನಗಳನ್ನು ಒಳಗೊಂಡಿವೆ.